ಭಾರತ ಇಂದು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪಾಕಿಸ್ತಾನ ಸೇನೆಯೇ ಕಾರಣ: ಎಸ್.ಜೈಶಂಕರ್ | S. Jaishankar

ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್
ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್
Published on
ನವದೆಹಲಿ: ಭಾರತ ಇಂದು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪಾಕಿಸ್ತಾನ ಸೇನೆಯೇ ಕಾರಣ, ಅದು ಭಾರತದ ವಿರುದ್ಧ ಸೈದ್ದಾಂತಿಕ ದ್ವೇಷದಲ್ಲಿ ತೊಡಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್​.ಜೈಶಂಕರ್(S. Jaishankar) ಕಿಡಿಕಾರಿದ್ದಾರೆ. 
ಎನ್​ಡಿಟಿವಿ ಸಂಪಾದಕ ರಾಹುಲ್ ಕನ್ವಾಲ್​ರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪಾಕ್​ ಭಯೋತ್ಪಾದನೆ, ಉಗ್ರ ಕೃತ್ಯ ತರಬೇತಿ ಶಿಬಿರಗಳನ್ನು ಸ್ಥಾಪಿಸುವುದನ್ನು ನೋಡಿದಾಗ ಅವರು ಭಾರತದ ಬಗ್ಗೆ ಪ್ರತಿಕೂಲ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬುದು ಬಹಳ ಸ್ಪಷ್ಟವಾಗುತ್ತದೆ. ಇದನ್ನೆಲ್ಲಾ ಯಾರು ಮಾಡುತ್ತಿದ್ದಾರೆ? ಪಾಕಿಸ್ತಾನೆ ಸೇನೆ, ಆದ್ಯಾಗ್ಯೂ ಅದರಿಂದ ಬರುವ ಸವಾಲುಗಳನ್ನು ಭಾರತ ಸೆದೆಬಡಿಯುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬಗ್ಗೆ ಮಾತನಾಡುತ್ತಾ, ಭಯೋತ್ಪಾದಕರಲ್ಲಿ ಒಳ್ಳೆಯ ಭಯೋತ್ಪಾದಕರು ಮತ್ತು ಕೆಟ್ಟ ಭಯೋತ್ಪಾದಕರು ಇಲ್ಲದಿರುವಂತೆಯೇ, ಒಳ್ಳೆಯ ಮಿಲಿಟರಿ ನಾಯಕರು ಮತ್ತು ಕೆಟ್ಟ ಮಿಲಿಟರಿ ನಾಯಕರು ಎಂಬುವರು ಇಲ್ಲ ಎಂದು ತಿಳಿಸಿದ್ದಾರೆ.
ಭಾರತವು ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಯಾವುದೇ ಕ್ರಮ ಕೈಗೊಂಡರೂ ಅದು ದೇಶಕ್ಕೆ, ದೇಶದ ಜನರಿಗೆ, ಮಾಧ್ಯಮ ಮತ್ತು ನಾಗರಿಕ ಸಮಾಜಕ್ಕೆ ಹೊಣೆಗಾರನಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಒಂಬತ್ತು ಪ್ರದೇಶಗಳಲ್ಲಿ 24 ಕ್ಷಿಪಣಿ ದಾಳಿಗಳನ್ನು ನಡೆಸಿ. 70 ಭಯೋತ್ಪಾದಕರನ್ನು ಸೇನೆ ಕೊಂದಿತು. 60 ಉಗ್ರರು ಗಾಯಗೊಂಡರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net