ಸಂಸತ್ ಆವರಣದಲ್ಲಿ ಮಂಗಳವಾರ(ಮಾ. 24) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ವಿದೇಶಾಂಗ ನೀತಿ ಪ್ರಧಾನಿ ಮೋದಿಯವರ ವೈಯಕ್ತಿಕ ವಿದೇಶಾಂಗ ನೀತಿಯಾಗಿದೆ. ಅದನ್ನು ಎಲ್ಲರೂ ಸಾರ್ವಜನಿಕ ತಮಾಷೆ ಎಂದು ಪರಿಗಣಿಸುತ್ತಾರೆ. ಮೋದಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಡೊನಾಲ್ಡ್ ಟ್ರಂಪ್ ನಿರ್ಧರಿಸುತ್ತಾರೆ. ಪ್ರಧಾನಿ ರಾಜಿಯಾದ್ರೆ, ನಮ್ಮ ವಿದೇಶಾಂಗ ನೀತಿಯೂ ರಾಜಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.