ಅಯೋಧ್ಯೆಯ ರಾಮ ಮಂದಿರದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಬ್ಯಾನ್! | Ayodhya

Ayodhya
Ayodhya
Published on
ಉತ್ತರಪ್ರದೇಶ: ಅಯೋಧ್ಯೆಯ( Ayodhya) ರಾಮ ಮಂದಿರದ ಸುತ್ತಮುತ್ತಲ ಪ್ರದೇಶದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರವು ರಾಮ ಮಂದಿರದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಪದಾರ್ಥಗಳ ಆನ್‌ಲೈನ್ ವಿತರಣೆಯನ್ನು (Online Delivery) ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅಯೋಧ್ಯೆಯ ಪವಿತ್ರ 'ಪಂಚಕೋಶಿ ಪರಿಕ್ರಮ' ಮಾರ್ಗದಲ್ಲಿ ಪವಿತ್ರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ಕೇವಲ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲದೆ, ಈ ಭಾಗದಲ್ಲಿರುವ ಹೋಂ ಸ್ಟೇಗಳು ಮತ್ತು ಗೆಸ್ಟ್ ಹೌಸ್‌ಗಳಲ್ಲೂ ಮಾಂಸಾಹಾರ ಮತ್ತು ಮದ್ಯವನ್ನು ನೀಡದಂತೆ ಶುಕ್ರವಾರ(ನೋಟಿಸ್​) ಎಚ್ಚರಿಕೆ ನೀಡಲಾಗಿದೆ.

ಆನ್‌ಲೈನ್ ಡೆಲಿವರಿಗೂ ಬ್ರೇಕ್

ಅಯೋಧ್ಯೆಯಲ್ಲಿ ಈಗಾಗಲೇ ಮಾಂಸದ ಮಾರಾಟದ ಮೇಲೆ ನಿರ್ಬಂಧವಿತ್ತು. ಆದರೆ, ಸ್ವಿಗ್ಗಿ ಮತ್ತು ಜೊಮ್ಯಾಟೋದಂತಹ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳ ಮೂಲಕ ಪ್ರವಾಸಿಗರು ಮತ್ತು ಸ್ಥಳೀಯರು ಮಾಂಸಾಹಾರವನ್ನು ತರಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಆನ್‌ಲೈನ್ ಮೂಲಕವೂ ಮಾಂಸಾಹಾರ ಪೂರೈಕೆ ಮಾಡದಂತೆ ಜಿಲ್ಲಾಡಳಿತ ಈಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಅಧಿಕಾರಿಗಳ ಸ್ಪಷ್ಟನೆ

ಆಹಾರ ಇಲಾಖೆಯ ಸಹಾಯಕ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಅವರ ಪ್ರಕಾರ, "ನಿಷೇಧದ ಹೊರತಾಗಿಯೂ ಕೆಲವು ಕಡೆಗಳಲ್ಲಿ ಆನ್‌ಲೈನ್ ಮೂಲಕ ಮಾಂಸಾಹಾರ ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ, ಎಲ್ಲಾ ಡೆಲಿವರಿ ಕಂಪನಿಗಳು ಮತ್ತು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಈ ಮೊದಲು ಮೇ 2025 ರಲ್ಲಿ 'ರಾಮ್ ಪಥ್' ಮಾರ್ಗದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. ಈಗ ಅದನ್ನು ಮತ್ತಷ್ಟು ವಿಸ್ತರಿಸಿ, ಡೆಲಿವರಿ ವ್ಯವಸ್ಥೆಯನ್ನೂ ನಿಯಂತ್ರಣಕ್ಕೆ ತರಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net