_1786608996682.webp?w=480&auto=format%2Ccompress&fit=max)
_1786608996682.webp?w=480&auto=format%2Ccompress&fit=max)
Parliament Monsoon Session
ಗುರುವಾರ ಬೆಳಿಗ್ಗೆ ಲೋಕಸಭೆಯಲ್ಲಿ ಕಂಡುಬಂದ 3 ನಿಮಿಷ ಹಾಗೂ 10 ಸೆಕೆಂಡ್ಗಳ ಸಮಯ ಬಹುಶಃ ಈ ಇಡೀ ಮುಂಗಾರು ಅಧಿವೇಶನದಲ್ಲೇ ಅತ್ಯಂತ ಶಾಂತಿಯುತವಾದ ಕ್ಷಣವಾಗಿತ್ತು ಎಂದರೇ ತಪ್ಪಾಗದು. ರಾಷ್ಟ್ರೀಯ ಗೀತೆ ವಂದೇ ಮಾತರಂ ಪ್ರಸಾರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಸಂಸದರು ಎದ್ದುನಿಂತು ಗೌರವ ಸಲ್ಲಿಸಿದರು. ತಕ್ಷಣವೇ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ (Sine Die) ಮುಂದೂಡುತ್ತಿರುವುದಾಗಿ ಘೋಷಿಸಿದರು.
ಸ್ಪೀಕರ್ ಭಾಷಣ ಮಾಡದೇ ನಿರ್ಗಮಿಸಿದ್ದೇಕೆ..?
ಸ್ಪೀಕರ್ ಚಹಾಕೂಟಕ್ಕೆ ವಿಪಕ್ಷಗಳ ಬಹಿಷ್ಕಾರ!
ಬುಧವಾರದಂದು, ಎಫ್ಸಿಆರ್ಎ ತಿದ್ದುಪಡಿ ವಿಧೇಯಕ, 2026 ಅನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಸರ್ಕಾರ ಮಂಡಿಸಿದಾಗಲೂ ಕೆಲ ನಿಮಿಷಗಳ ಕಾಲ ಬಿಸಿಯೇರಿದ ವಾತಾವರಣವಿತ್ತು. ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ನೇತೃತ್ವದ ವಿಪಕ್ಷಗಳು ಈ ವಿಧೇಯಕವು ಅಲ್ಪಸಂಖ್ಯಾತರು ಮತ್ತು ಎನ್ಜಿಒಗಳ ವಿರೋಧಿಯಾಗಿದೆ ಎಂದು ಹಿಂಪಡೆಯಲು ಆಗ್ರಹಿಸಿದವು. ಆದರೆ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿ, ವಿಧೇಯಕವನ್ನು ಜೆಪಿಸಿಗೆ ಕಳುಹಿಸಿತು.