ಈ ಒಪ್ಪಂದದ ಮೊದಲ ಮತ್ತು ಪ್ರಮುಖ ಅಂಶದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಯುದ್ಧದ ಆಕ್ರಮಣಗಳನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಎರಡನೆಯದಾಗಿ, ಅಮೆರಿಕವು ತನ್ನ ನೌಕಾ ದಿಗ್ಬಂಧನವನ್ನು ಹಿಂಪಡೆಯಲಿದ್ದು, ಇರಾನ್ ಹೋರ್ಮುಜ್ ಜಲಸಂಧಿಯನ್ನು ಪುನರಾರಂಭಿಸಲಿದೆ. ಅಲ್ಲದೆ ಜಲಮಾರ್ಗದ ಭವಿಷ್ಯದ ಆಡಳಿತದ ಕುರಿತು ಓಮನ್ ದೇಶದೊಂದಿಗೆ ಮಾತುಕತೆ ನಡೆಸಲಿದೆ. ಇದರೊಂದಿಗೆ, ಇರಾನ್‌ನ ಪುನರ್ನಿರ್ಮಾಣಕ್ಕಾಗಿ ಅಮೆರಿಕ 300 ಬಿಲಿಯನ್ ಡಾಲರ್ ನೀಡಲಿದ್ದು, ಇರಾನ್ ಯಾವುದೇ ಪರಮಾಣು ಅಸ್ತ್ರವನ್ನು ತಯಾರಿಸುವುದಿಲ್ಲ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.