Nitish Cabinet | ನಿತೀಶ್​ ಸರ್ಕಾರದ ಮಂತ್ರಿಗಳಿಗೆ ಖಾತೆ ಹಂಚಿಕೆ..ಯಾರಿಗೆ ಯಾವ ಸ್ಥಾನ..?

Nitish Cabinet | ನಿತೀಶ್ ಕುಮಾರ್ (ಕೃಪೆ- ಪಿಟಿಐ)
Nitish Cabinet | ನಿತೀಶ್ ಕುಮಾರ್ (ಕೃಪೆ- ಪಿಟಿಐ)
Published on
ಪಟನಾ: ದಾಖಲೆಯ 10 ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್ ಕುಮಾರ್, ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿಗೆ ಗೃಹ ಖಾತೆಯನ್ನು ನೀಡಲಾಗಿದೆ.
ಇನ್ನೊರ್ವ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಕಂದಾಯ ಮತ್ತು ಭೂಸುಧಾರಣಾ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಹಾರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್​ರಿಗೆ ಕೈಗಾರಿಕಾ ಖಾತೆ ನೀಡಲಾಗಿದೆ.
ನಿತೀಶ್ ಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೂ ಮುನ್ನ ನಡೆದ ಎನ್‌ಡಿಎ ಮಿತ್ರಪಕ್ಷಗಳ ಸಚಿವ ಸಂಪುಟ ರಚನೆ ಕುರಿತ ಮಾತುಕತೆಗಳ ವೇಳೆ ಜೆಡಿಯು ಗೃಹ ಖಾತೆಗೆ ಪಟ್ಟು ಹಿಡಿದಿತ್ತು ಎನ್ನಲಾಗಿದ್ದು, ಅಂತಿಮವಾಗಿ ಅದು ಬಿಜೆಪಿಗೆ ಒಲಿದಿದೆ. ಇಲ್ಲಿಯವರೆಗೆ ನಿತೀಶ್ ಬಳಿ ಇದ್ದ ಗೃಹ ಇಲಾಖೆಯನ್ನು ಸಾಮ್ರಾಟ್ ಚೌಧರಿಗೆ ನೀಡಲಾಗಿದೆ.
ಮಂಗಲ್ ಪಾಂಡೆ ಆರೋಗ್ಯ ಮತ್ತು ಕಾನೂನು ಇಲಾಖೆಗಳೆರಡರ ಜವಾಬ್ದಾರಿ ತೆಗೆದುಕೊಂಡಿದ್ದರೆ, ನಿತಿನ್ ನಬಿನ್​​ಗೆ ರಸ್ತೆ ನಿರ್ಮಾಣ ಇಲಾಖೆಯ ಜೊತೆಗೆ ನಗರಾಭಿವೃದ್ಧಿ ಮತ್ತು ವಸತಿ ಖಾತೆಯನ್ನು ಸಹ ನೀಡಲಾಗಿದೆ. ರಾಮಕೃಪಾಲ್ ಯಾದವ್ ಕೃಷಿ ಸಚಿವರಾಗಿ ಮತ್ತು ಸಂಜಯ್ ಟೈಗರ್ ಕಾರ್ಮಿಕ ಸಂಪನ್ಮೂಲ ಖಾತೆಯನ್ನು ವಹಿಸಿಕೊಂಡಿದ್ದಾರೆ.
ಅರುಣ್ ಶಂಕರ್ ಪ್ರಸಾದ್ ಅವರಿಗೆ ಕಲೆ, ಸಂಸ್ಕೃತಿ ಮತ್ತು ಯುವಜನ ವ್ಯವಹಾರಗಳ ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದ್ದು, ಸುರೇಂದ್ರ ಮೆಹ್ತಾಗೆ ಪ್ರಾಣಿ ಮತ್ತು ಮೀನುಗಾರಿಕೆ ಸಂಪನ್ಮೂಲಗಳ ಖಾತೆ ಮತ್ತು ನಾರಾಯಣ್ ಪ್ರಸಾದ್ ಅವರಿಗೆ ವಿಪತ್ತು ನಿರ್ವಹಣಾ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
ರಾಮ ನಿಶಾದ್ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ನೋಡಿಕೊಳ್ಳಲಿದ್ದು, ಲಖೇದಾರ್ ಪಾಸ್ವಾನ್ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಶ್ರೇಯಸಿ ಸಿಂಗ್ ಮಾಹಿತಿ ತಂತ್ರಜ್ಞಾನ ಮತ್ತು ಕ್ರೀಡಾ ಇಲಾಖೆ, ಪ್ರಮೋದ್ ಚಂದ್ರವಂಶಿ ಸಹಕಾರ ಮತ್ತು ಪರಿಸರ-ಅರಣ್ಯ-ಹವಾಮಾನ ಬದಲಾವಣೆ ಖಾತೆಗಳನ್ನು ನೋಡಿಕೊಳ್ಳಲಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net