ಇದೇ ಕೆಲಸ ಮುಂಚೆನೇ ಮಾಡಿದ್ರೆ... ಮೊದಲ 7 ಬಾಲ್​ನಲ್ಲಿ ಕಿವೀಸ್​ ಓಪನರ್​ಗಳಿಗೆ ಗುಡ್​ಬೈ! ಗೌತಿಗೆ ಮತ್ತೆ ಕುಟುಕಿದ ನೆಟ್ಟಿಗರು

ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯ
ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • 3ನೇ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಕಮಾಲ್​
  • ಕೊನೆಯ ಪಂದ್ಯದಲ್ಲಿ ಕಮ್​ಬ್ಯಾಕ್, ಅದ್ಭುತ ಪ್ರದರ್ಶನ
  • ಸ್ಥಾನ ಕೊಡದ ಗೌತಮ್ ಗಂಭೀರ್ ವಿರುದ್ಧ ನೆಟ್ಟಿಗರಿಂದ ಟೀಕೆಗಳು
ಇಂದೋರ್​: ​ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶುಭಮನ್ ಗಿಲ್ ಪಡೆ, ಕಿವೀಸ್​ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್​ಗಿಳಿದ ನ್ಯೂಜಿಲೆಂಡ್​ನ ಸ್ಟಾರ್​ ಓಪನರ್ಸ್​ಗಳಾದ ಡೆವಾನ್​ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್​ ಟೀಮ್ ಇಂಡಿಯಾ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು.
ಮೊದಲ ಎರಡು ಪಂದ್ಯಗಳಿಂದ ಅರ್ಷದೀಪ್​ ಸಿಂಗ್​​ರನ್ನು ಕೈಬಿಟ್ಟಿದ್ದ ಕೋಚ್​ ಗೌತಮ್ ಗಂಭೀರ್​ ನೇತೃತ್ವದ ಮ್ಯಾನೇಜ್​ಮೆಂಟ್​, ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ನೀಡಿತು. ಅದಕ್ಕೆ ತಕ್ಕಂತೆ, ಸಿಂಗ್ ತಾವು ಮಾಡಿದ ಮೊದಲ ಓವರ್​ನಲ್ಲೇ ಹೆನ್ರಿ ಅವರ ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಎರಡನೇ ಓವರ್​ನ ಮೊದಲ ಬಾಲ್​ನಲ್ಲಿ ಹರ್ಷಿತ್ ರಾಣಾ, ಕಾನ್ವೆ ಅವರ ವಿಕೆಟ್​ ಕಬಳಿಸಿದರು.

ಗೌತಿಗೆ ತಪ್ಪದ ಛೀಮಾರಿ

ಅರ್ಷದೀಪ್​ ಸಿಂಗ್ ಒಬ್ಬ ಅದ್ಭುತ್ ಬೌಲರ್​. ಆತನಿಗೆ ತಂಡದಲ್ಲಿ ಸ್ಥಾನ ಕೊಡುವ ಮೂಲಕ ಅವನಲ್ಲಿರುವ ಕೌಶಲ್ಯವನ್ನು ಹೆಚ್ಚಿಸಬೇಕು. ಈ ವಿಷಯದಲ್ಲಿ ಗೌತಮ್ ಗಂಭೀರ್​ ಮತ್ತು ಅವರ ಮ್ಯಾನೇಜ್​ಮೆಂಟ್​ ಮಾಡುತ್ತಿರುವ ನಿರ್ಧಾರ ಸರಿಯಿಲ್ಲ. ವಿಕೆಟ್​ ಕಿತ್ತುಬಿಸಾಡುವ ವೇಗಿಗೆ ಅವಕಾಶ ಕೊಡುವುದು ಒಳಿತೇ ವಿನಃ ಮೂಲೆಯಲ್ಲಿ ಕೂರಿಸಿ, ತುಕ್ಕು ಹಿಡಿಯುವಂತೆ ಮಾಡುವುದಲ್ಲ ಎಂದು ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​ ಕಿಡಿಕಾರಿದ್ದರು.

ನಾಚಿಕೆಗೇಡಿನ...

ಮೂರನೇ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಿದ್ದೇ ತಡ, ಕಿವೀಸ್​ ಪಡೆಯ ಆರಂಭಿಕನ ವಿಕೆಟ್​ ಪಡೆದು ಅರ್ಷದೀಪ್ ಮಿಂಚಿದರು. ಇದನ್ನು ನೋಡ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೌತಮ್ ಗಂಭೀರ್ ವಿರುದ್ಧ ಟೀಕೆಗಳನ್ನು ಹರಿಸಿದ ನೆಟ್ಟಿಗರು, ಬಂದ ತಕ್ಷಣ ವಿಕೆಟ್​ ಕಬಳಿಸಿದ ಸಿಂಗ್​ಗೆ ಅವಕಾಶ ಕೊಡಲು ಗಂಭೀರ್​ ಹಿಂದೇಟು ಹಾಕುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದೆಲ್ಲ ಟ್ವೀಟ್ ಮಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net