ಆದ್ಯಾಗೂ ಪಹಲ್ಗಾಮ್ ದಾಳಿಯ ಬಳಿಕ, ಭಾರತ-ಪಾಕಿಸ್ತಾನ ಉದ್ವಿಗ್ನತೆ, ರಾಜತಾಂತ್ರಿಕ ಸಂಪರ್ಕ ಹಾಗೂ ಆಪರೇಷನ್ ಸಿಂಧೂರ ಕುರಿತಾದ ತಮ್ಮ ಹೇಳಿಕೆಗಳು ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವಿಗಿಂತ ಭಿನ್ನವಾಗಿದ್ದನ್ನು ಒಪ್ಪಿಕೊಂಡ ಅವರು, ಪಕ್ಷದ ಸದಸ್ಯರ ನಿರೀಕ್ಷೆಗಳನ್ನು ನಾನು ಒಪ್ಪುತ್ತೇನೆ. ಪಕ್ಷದೊಳಗೆ ಶಿಸ್ತು ಮುಖ್ಯ. ನಾನು ಯಾವಾಗಲೂ ಸಂಸತ್ನಲ್ಲಿ ಪಕ್ಷದೊಂದಿಗೆ ನಿಂತಿದ್ದೇನೆ. ಯಾವುದೇ ಗೊಂದಲಕ್ಕೆ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.