ಆರೋಪಿ ಸಿಂಧು ಒಡೆತನದ ದುಬೈ ಮೂಲದ ‘ಆಲಿಸ್ ಇವೆಂಟ್ಸ್’ ಎಂಬ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಂತ್ರಸ್ತ ಮಹಿಳೆಯನ್ನು ವಿದೇಶಕ್ಕೆ ಕರೆದೊಯ್ಯಲಾಗಿತ್ತು. ವೀಸಾ ಮತ್ತು ವಿಮಾನದ ಟಿಕೆಟ್ಗಾಗಿ ಸಿಂಧು, ಸಂತ್ರಸ್ತೆಯಿಂದ ಬರೋಬ್ಬರಿ 4.75 ಲಕ್ಷ ರೂಪಾಯಿಗಳನ್ನು ಪೀಕಿದ್ದಳು. ಈ ಆಮಿಷವನ್ನು ನಂಬಿದ ಮಹಿಳೆ 2024ರ ಫೆಬ್ರವರಿ 20 ರಂದು ದುಬೈ ತಲುಪಿದ್ದರು. ಆದರೆ ಅಲ್ಲಿಗೆ ತಲುಪಿದ ಬೆನ್ನಲ್ಲೇ ಆಕೆಯನ್ನು ಒಂದು ಅಪಾರ್ಟ್ಮೆಂಟ್ಗೆ ಕರೆದೊಯ್ದು, ಬಾಟಲಿಯಲ್ಲಿದ್ದ ಬಿಳಿ ಬಣ್ಣದ ನಿಗೂಢ ಪೌಡರ್ (ಮಾದಕ ದ್ರವ್ಯ) ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ತದನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬೇರೆ ಪುರುಷರಿದ್ದ ಕೋಣೆಗೆ ತಳ್ಳಿ, ಅವರ ಮೇಲೆ ಗ್ಯಾಂಗ್ ರೇಪ್ (ಸಾಮೂಹಿಕ ಅತ್ಯಾಚಾರ) ಎಸಗಲಾಗಿತ್ತು ಎಂಬ ಅತ್ಯಂತ ಭೀಕರ ಸತ್ಯ ಪೊಲೀಸರ ರಿಮಾಂಡ್ ವರದಿಯಿಂದ ತಿಳಿದುಬಂದಿದೆ.