ಟೆಹ್ರಾನ್: ಇತ್ತೀಚೆಗೆ ಇರಾನ್ನ ಕಾರಾಜ್ ನಗರದ ಸಮೀಪವಿರುವ ಬೃಹತ್ 'B1' ಸೇತುವೆಯ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಪಡೆಗಳು ನಡೆಸಿದ ವಿನಾಶಕಾರಿ ದಾಳಿಗೆ ಪ್ರತಿಯಾಗಿ, ಇರಾನ್ ಈಗ ಗಲ್ಫ್ ರಾಷ್ಟ್ರಗಳ ಆರ್ಥಿಕ ಬೆನ್ನೆಲುಬಾಗಿರುವ ಸೇತುವೆಗಳ(Gulf Bridges) ಹಿಟ್-ಲಿಸ್ಟ್ ಬಿಡುಗಡೆ ಮಾಡಿದೆ. ಇರಾನ್ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ಫಾರ್ಸ್ ಈ ಮಾಹಿತಿಯನ್ನು ಹೊರಹಾಕಿದ್ದು, ಅರಬ್ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ.