ರಾಷ್ಟ್ರಪತಿಗಳಿಗೆ ಭಾವನಾತ್ಮಕ ಕ್ಷಣಗಳಲ್ಲಿ ಕರವಸ್ತ್ರವನ್ನು ನೀಡುವುದರಿಂದ ಹಿಡಿದು, ಮಳೆಯಲ್ಲಿ ಛತ್ರಿ ಹಿಡಿಯುವವರೆಗೆ, ಮೇಜರ್ ಸಂಬ್ಯಾಲ್ ಅಧಿಕೃತ ಕಾರ್ಯಕ್ರಮಗಳ ಸಮಯದಲ್ಲಿ ತಕ್ಷಣವೇ ಸ್ಪಂದಿಸುತ್ತಾರೆ. ಈ ಎಲ್ಲಾ ಕ್ಷಣಗಳು ಸಾಮಾಜಿಕ ಜಾಲತಾಣ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದ್ದು, ಮುರ್ಮು ಮತ್ತು ಅವರ ಎಡಿಸಿ ನಡುವಿನ ನಂಬಿಕೆ, ವಿಶ್ವಾಸ, ಅವರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುವ ಗುಣ ಎಲ್ಲರ ಮನ ತಲುಪಿದೆ.