BMC Polls | ಸೀಟು ಹಂಚಿಕೆಗೆ ಮಹಾಯುತಿಯಲ್ಲಿ ಬಿರುಕು...? ಫ್ರೆಂಡ್ಲಿ ಫೈಟ್​ ಸಾಧ್ಯತೆ

BMC Polls
BMC Polls
Published on
ಮುಂಬೈ: ಮುಂಬರುವ ಬಿಎಂಸಿ ಚುನಾವಣೆಗೂ ಮುನ್ನ, ಆಡಳಿತಾರೂಢ ಮಹಾಯುತಿಯ ಮಿತ್ರಪಕ್ಷಗಳಲ್ಲಿ ಸಂಘರ್ಷ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದು ವಿಶೇಷವಾಗಿ ಸೀಟು ಹಂಚಿಕೆ ಸೂತ್ರದ ಬಗ್ಗೆ ಎನ್ನುವುದು ಮೂಲಗಳ ಮಾಹಿತಿ.

ಶಿವಸೇನೆ ಬೇಡಿಕೆ ಏನು..?

ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 90 ರಿಂದ 100 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಪಕ್ಷವು ನೆಲೆಯನ್ನು ವೃದ್ಧಿಸಿಕೊಳ್ಳಲು ಇದು ಅವಶ್ಯಕವು ಆಗಿದೆ. ಮಹಾಲಕ್ಷ್ಮಿಯಿಂದ ಹಿಡಿದು ದಾದರ್, ವಡಾಲಾ, ಅಂಧೇರಿ ಮತ್ತು ಪೂರ್ವ ಉಪನಗರಗಳವರೆಗಿನ ಪ್ರದೇಶಗಳಲ್ಲಿ ಶಿವಸೇನೆ ವರ್ಷಗಳಿಂದ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ ಎಂದು ಅನೇಕ ನಾಯಕರು ಹೇಳಿಕೊಂಡಿದ್ದು, 2022 ರಲ್ಲಿ ಪಕ್ಷ ಇಬ್ಬಾಗವಾದರೂ, ಎರಡೂ ಬಣಗಳು ಬಿಎಂಸಿಯಲ್ಲಿ ತಮ್ಮ ಶಕ್ತಿಯನ್ನು ವೃದ್ದಿಸಿಕೊಳ್ಳಲು ತಯಾರಿ ನಡೆಸುತ್ತಿವೆ.

ಬಿಜೆಪಿಗೆ ಬೇಕಿರುವ ಸ್ಥಾನಗಳೆಷ್ಟು..?

ಮುಂಬೈನ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ 135 ರಿಂದ 140 ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಅದಕ್ಕಾಗಿ ಪೂರ್ವ ತಯಾರಿಯನ್ನು ಸಹ ನಡೆಸಿದೆ. 2017 ರ ಚುನಾವಣೆಯಲ್ಲಿ, 227 ಸ್ಥಾನಗಳಲ್ಲಿ ಶಿವಸೇನೆ 84, ಬಿಜೆಪಿ 82 ಸ್ಥಾನಗಳಲ್ಲಿ ಜಯ ಸಾಧಿಸಿದ್ದವು. ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ಕೂಡ ಉತ್ತಮ ಪ್ರದರ್ಶನ ನೀಡಿದ್ದವು.

ಫ್ರೆಂಡ್ಲಿ ಫೈಟ್​...

ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ, ಅಜಿತ್ ಪವಾರ್ ನೇತೃತ್ವದ ಎನ್​​ಸಿಪಿ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಈ ಪುರಸಭೆಯ ಪ್ರದೇಶಗಳಲ್ಲಿ ಎರಡೂ ಪಕ್ಷಗಳ ಸಮಬಲದ ಸಂಘಟನೆ ಹೊಂದಿವೆ. ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುವುದರಿಂದ ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಂತಾಗುತ್ತದೆ. ನವಿ ಮುಂಬೈ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ, ಮೈತ್ರಿಕೂಟ ಇನ್ನೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದ್ದು, ಸಾಧ್ಯವಾದಷ್ಟರ ಮಟ್ಟಿಗೆ ಮುಂಬರುವ ಪುರಸಭೆ ಚುನಾವಣೆಗಳನ್ನು ಒಪ್ಪಂದಗಳ ಮೂಲಕವೇ ಎದುರಿಸಬೇಕೆಂದು ಮಹಾಯುತಿ ನಿರ್ಧರಿಸಿದ್ದು, ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಮೂರೂ ಮಿತ್ರಪಕ್ಷಗಳು ಫ್ರೆಂಡ್ಲಿ ಫೈಟ್​ಗೆ ತಯಾರಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net