ಲಿವ್-ಇನ್ ಸಂಬಂಧ ಸರಿಯಲ್ಲ; ಮದುವೆ, ಕುಟುಂಬ ದೈಹಿಕ ತೃಪ್ತಿಯ ಸಾಧನವಲ್ಲ; ಅದು ಸಮಾಜದ ಘಟಕ: ಮೋಹನ್ ಭಾಗವತ್ | Mohan Bhagwat

ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
Published on
ಕೋಲ್ಕತ್ತಾ: ಸಮಾಜದಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಲಿವ್-ಇನ್ ಸಂಬಂಧದ ಬಗ್ಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಪ್ರತಿಕ್ರಿಯಿಸಿದ್ದು, ಇದು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ದರಿಲ್ಲದ ವ್ಯವಸ್ಥೆ, ಇದು ಸರಿಯಲ್ಲ. ಕುಟುಂಬ, ಮದುವೆ, ಕೇವಲ ದೈಹಿಕ ತೃಪ್ತಿಯ ಸಾಧನವಲ್ಲ. ಇದು ಸಮಾಜದ ಒಂದು ಘಟಕ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಇಂದು(ಡಿ. 21) ನಡೆದ ಆರ್‌ಎಸ್‌ಎಸ್ 100 ವ್ಯಾಖ್ಯಾನ ಮಾಲಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕುಟುಂಬವು ಒಬ್ಬ ವ್ಯಕ್ತಿಯು ಸಮಾಜದಲ್ಲಿ ಹೇಗೆ ಬದುಕಬೇಕೆಂದು ಕಲಿಯುವ ಸ್ಥಳವಾಗಿದೆ. ಇದು ನಮ್ಮ ದೇಶ, ಸಮಾಜ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಸಂರಕ್ಷಿಸುವ ಪದ್ದತಿಯಾಗಿದೆ. ನೀವು ಮದುವೆಯಾಗಲು ಬಯಸದಿದ್ದರೆ, ಅದು ಸರಿ. ಸನ್ಯಾಸಿಗಳಾಗಬಹುದು. ಆದರೆ ನೀವು ಅದನ್ನು ಮಾಡದಿದ್ದರೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ ಹೇಗೆ? ಎಂದಿದ್ದಾರೆ.
ದಂಪತಿ ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬುದು ಕುಟುಂಬದ ನಿರ್ಧಾರ, ಮತ್ತು ಸಮಾಜಕ್ಕೆ ಸಂಬಂಧಿಸಿದ್ದು, ಒಂದು ಸೂತ್ರವನ್ನು ನೀಡಲಾಗುವುದಿಲ್ಲ. ವೈದ್ಯರೊಂದಿಗೆ ಮಾತನಾಡುವ ಮೂಲಕ ಕೆಲ ವಿಷಯ ತಿಳಿದಿದ್ದೇನೆ. ಅವರು ಹೇಳುತ್ತಾರೆ ಮದುವೆಯು 19-25 ವರ್ಷ ವಯಸ್ಸಿನೊಳಗೆ ನಡೆದರೆ ಮತ್ತು ಮೂರು ಮಕ್ಕಳಿದ್ದರೆ, ಪೋಷಕರು ಮತ್ತು ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ. ಮೂರು ಮಕ್ಕಳನ್ನು ಹೊಂದುವುದು ಕೂಡ ಅಹಂಕಾರ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ನಾವು ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿಲ್ಲ. ಜನಸಂಖ್ಯೆಯು ಒಂದು ಹೊರೆಯಾಗಿದೆ, ಜೊತೆಗೆ ಅದು ಒಂದು ಆಸ್ತಿಯೂ ಆಗಿದೆ. ನಮ್ಮ ದೇಶದ ಪರಿಸರ, ಮೂಲಸೌಕರ್ಯ, ಸೌಲಭ್ಯಗಳು, ಮಹಿಳೆಯರ ಸ್ಥಿತಿ, ಅವರ ಆರೋಗ್ಯ ಮತ್ತು ದೇಶದ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ನಾವು 50 ವರ್ಷಗಳ ಪ್ರಕ್ಷೇಪಣದ ಆಧಾರದ ಮೇಲೆ ನೀತಿಯನ್ನು ರೂಪಿಸಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net