ಬಂಡಾಯದ ಮುಂಚೂಣಿಯಲ್ಲಿರುವ ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್ಮುಖ್, ನಾಗೇಶ್ ಪಾಟೀಲ್ ಅಷ್ಟೀಕರ್, ಓಮ್ರಾಜೆ ನಿಂಬಾಳ್ಕರ್, ಭಾವುಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರ ಫೋನ್ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರ ಜೊತೆಗೆ ಮತ್ತೊಬ್ಬ ಸಂಸದ ರಾಜಾಭಾವಿ ವಾಜೆ ಕೂಡ ಕೈಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇವರೆಲ್ಲರೂ ಮೊದಲು ಪ್ರತ್ಯೇಕ ಬಣ ರಚಿಸಿಕೊಂಡು, ಬಳಿಕ ಶಿಂಧೆ ನೇತೃತ್ವದ ಅಸಲಿ ಶಿವಸೇನೆ ಜೊತೆ ವಿಲೀನಗೊಳ್ಳುವ ಆಲೋಚನೆಯಲ್ಲಿದ್ದಾರೆ.