_1786943881004.webp?w=480&auto=format%2Ccompress&fit=max)
_1786943881004.webp?w=480&auto=format%2Ccompress&fit=max)
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕ ಕುನಾಲ್ ಘೋಷ್ (Kunal Ghosh) ಶನಿವಾರ ಪಕ್ಷದ ಎರಡೂ ಬಣಗಳು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಕುರಿತಾಗಿ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗರಾಗಿರುವ ಘೋಷ್, ತಾವೇನೂ ಎದುರಾಳಿ ರಿತಬ್ರತ ಬ್ಯಾನರ್ಜಿ ಬಣಕ್ಕೆ ಸೇರ್ಪಡೆಯಾಗುತ್ತಿಲ್ಲ ಎಂದು ನಂತರ ಸ್ಪಷ್ಟಪಡಿಸಿದ್ದಾರೆ.
ರಿತಬ್ರತ ಬಣದ ವಕ್ತಾರ ಕೊಹಿನೂರ್ ಮಜುಂದಾರ್ ಮಾತನಾಡಿ, ಘೋಷ್ ಅವರ ಈ ಭೇಟಿಯು ಮುಂಬರುವ ದಿನಗಳಲ್ಲಿ ಅವರ ಮುಂದಿನ ರಾಜಕೀಯ ನಡೆಗೆ ಸೂಚನೆಯಾಗಿರಬಹುದು ಎಂದಿದ್ದಾರೆ. ಕುನಾಲ್ ಘೋಷ್ ಇಲ್ಲಿಗೆ ಬಂದಿದ್ದರು. ಅವರು ಕರೆ ಗಂಟೆಯನ್ನು ಬಾರಿಸಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಲಗೇಜ್ ಸಮೇತ ಇಲ್ಲಿಗೆ ಬರಲಿದ್ದಾರೆ ಎಂದು ಮಜುಂದಾರ್ ವ್ಯಂಗ್ಯವಾಡಿದ್ದಾರೆ.
ಘೋಷ್ ನೀಡಿದ ಸ್ಪಷ್ಟನೆ ಇಲ್ಲಿದೆ!
ಮಮತಾ ಬ್ಯಾನರ್ಜಿ ಅವರಿಂದ ದೂರವಾಗಿ ಬಿಜೆಪಿಗೆ ಹತ್ತಿರವಾಗುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ಘೋಷ್, ತಮ್ಮ ನಿಲುವನ್ನು ಸ್ಪಷ್ಟಪಡಿಸಲೆಂದೇ ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಕಾಳೀಘಾಟ್ನಿಂದ ಅಂತರ ಕಾಯ್ದುಕೊಂಡು ಬಿಜೆಪಿಗೆ ಹತ್ತಿರವಾದವರು ತಿಳಿದುಕೊಳ್ಳಬೇಕು, ನಾನು ಅವರ ಎದುರಲ್ಲೇ ನಿಂತು ಬಿಜೆಪಿಯನ್ನು ಖಂಡಿಸಿದ್ದೇನೆ ಎಂದು ಅವರು ಸವಾಲು ಹಾಕಿದ್ದಾರೆ.
ಅನಂತ ಮಹಾರಾಜ್ರನ್ನು ಬಂಧಿಸಿ!...
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಸರ್ಕಾರದ ನೀತಿಗಳು ಸಾಮಾನ್ಯ ಜನರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀವ್ರ ಹಾನಿ ಮಾಡಿವೆ ಎಂದು ಆರೋಪಿಸಿದರು. ನಾವು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬಿಜೆಪಿಯ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು