ಮತ್ತೊಂದೆಡೆ, ಇರಾನ್ನ ಪ್ರಸ್ತುತ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೆ ಗೈರುಹಾಜರಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕನ್ ಗುಪ್ತಚರ ಸಂಸ್ಥೆಗಳ ಮಾಹಿತಿಯ ಪ್ರಕಾರ, ಅಂದು ನಡೆದ ವಾಯುದಾಳಿಯ ವೇಳೆ ಮೊಜ್ತಾಬಾ ಅವರು ತಮ್ಮ ತಂದೆಯ ನಿವಾಸದ ಮತ್ತೊಂದು ಕೋಣೆಯಲ್ಲಿದ್ದರು. ದಾಳಿಯಿಂದ ಅವರು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದರೂ, ಅವರ ಮುಖ ಸಂಪೂರ್ಣವಾಗಿ ವಿರೂಪಗೊಂಡಿದೆ ಹಾಗೂ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಂತ್ಯಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ನಂಬಲಾಗಿದೆ, (ಏಜೆನ್ಸೀಸ್).