ಕರೂರು ಕಾಲ್ತುಳಿತ ದುರಂತ; ದೆಹಲಿಯಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ದಳಪತಿ ವಿಜಯ್ | Thalapathy Vijay

 ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್
ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್
Published on
ಚೆನ್ನೈ: 2025 ಸೆಪ್ಟೆಂಬರ್ 27ರಂದು 41 ಮಂದಿಯನ್ನು ಬಲಿಪಡೆದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್(Thalapathy Vijay) ಇಂದು(ಜ. 12) ದೆಹಲಿಯಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) ಸೆಕ್ಷನ್ 179ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜನವರಿ 6ರಂದು ಸಿಬಿಐ ಸಮನ್ಸ್ ಹೊರಡಿಸಿತ್ತು. ಈ ಹಿನ್ನಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಚೆನ್ನೈನಿಂದ ಆಗಮಿಸಿದ ವಿಜಯ್ ಬೆಳಗ್ಗೆ 11 ಗಂಟೆಗೆ ದೆಹಲಿಯ ಸಿಬಿಐ ಕಚೇರಿಯಲ್ಲಿ ಹಾಜರಾಗಿದ್ದಾರೆ.
ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆಯಿಂದ ನಡೆಸದೇ ಕೇಂದ್ರ ತನಿಖಾ ಸಂಸ್ಥೆ ಅಥವಾ ನ್ಯಾಯಾಂಗದ ಮೂಲಕ ತನಿಖೆ ನಡೆಸುವಂತೆ ಈ ಹಿಂದೆ ಟಿವಿಕೆ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದ ಮೂಲಕ ತನಿಖೆ ಸಿಬಿಐ ತನಿಖೆ ನಡೆಸುತ್ತಿದ್ದು, ಸಮನ್ಸ್​ಗೆ ಉತ್ತರ ಕೊಡದೇ ಇರುವುದು, ಹಾಜರಾಗುವುದಿರುವುದು ಸರಿಯಲ್ಲ. ಹೀಗಾಗಿ ಕಾನೂನು ಸಲಹೆಗಾರರ ಸಲಹೆ ಪಡೆದು ವಿಜಯ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಕರಣಕದ ತನಿಖೆಯ ಭಾಗವಾಗಿ ಈಗಾಗಲೇ ಸಿಬಿಐ ಟಿವಿಕೆ ನಾಯಕರಾದ ಎನ್. ಆನಂದ್, ಆಧವ್ ಅರ್ಜುನ, ಸಿಟಿಆರ್ ನಿರ್ಮಲ್ ಕುಮಾರ್ ಮತ್ತು ಮಥಿಯಝಗನ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಕರೂರ್ ಜಿಲ್ಲಾಧಿಕಾರಿ ಮತ್ತು ಎಸ್​ಪಿಯ ಹೇಳಿಕೆಯನ್ನೂ ದಾಖಲಿಸಿದೆ.
ಹೊಸ ಪಕ್ಷ ಕಟ್ಟಿ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿ ರಾಜ್ಯ ಪ್ರವಾಸ ಕೈಗೊಂಡಿದ್ದ ದಳಪತಿ, ಕಳೆದ ವರ್ಷದ ಸೆಪ್ಟಂಬರ್​ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ನಡೆದಿದ್ದ ಪ್ರಚಾರದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ 41 ಮಂದಿ ಮೃತಪಟ್ಟು, 110 ಜನ ಗಾಯಗೊಂಡಿದ್ದರು. ಮೊದಲು ಪ್ರಾಥಮಿಕ ಹಂತವಾಗಿ ತನಿಖೆ ನಡೆಸಿದ್ದ ಎಸ್​ಐಟಿ, ಬಳಿಕ ಸುಪ್ರೀಂ ಆದೇಶದ ಬೆನ್ನಲ್ಲೇ ಸಿಬಿಐಗೆ ಕೇಸ್ ಅನ್ನು ವರ್ಗಾಯಿಸಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net