ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಪುಣೆ ನ್ಯಾಯಾಲಯವು ಆರೋಪಿಗಳಾದ ಸಿಯಾ ಗೋಯಲ್ (20) ಮತ್ತು ಚೇತನ್ ಚೌಧರಿ (22) ಅವರನ್ನು ಜುಲೈ 16 ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಕೋಡ್ ಭಾಷೆಗಳಲ್ಲಿರುವ ಚಾಟ್‌ಗಳಿದ್ದು, ಅವುಗಳನ್ನು ಡಿಕೋಡ್ ಮಾಡಲು ಹೆಚ್ಚಿನ ಪೊಲೀಸ್ ಕಸ್ಟಡಿಯ ಅಗತ್ಯವಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ, ಪೊಲೀಸರಿಗೆ ಈಗಾಗಲೇ ತನಿಖೆ ನಡೆಸಲು ಸಾಕಷ್ಟು ಸಮಯ ನೀಡಲಾಗಿದೆ ಎಂದು ಪ್ರತಿಪಾದಿಸಿದ ಡಿಫೆನ್ಸ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಪೊಲೀಸ್ ಕಸ್ಟಡಿ ಅರ್ಜಿಯನ್ನು ತಿರಸ್ಕರಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.