

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಅಚಲ ಸಮರ್ಪಣೆ ಮತ್ತು ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತಿವೆ ಎಂದು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ತಾಷ್ಕೆಂಟ್ನಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರತಿಕ್ರಿಯಿಸಿದ್ದು, ಶಾಸ್ತ್ರಿ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪರಂಪರೆಯನ್ನು ಗೌರವಿಸಿದ್ದಾರೆ ಎಂದು ತಿಳಿಸಿದೆ. ಅವರ ಜೀವನವು ಸರಳತೆ, ಧೈರ್ಯ ಮತ್ತು ದೇಶಕ್ಕಾಗಿಯೇ ಅರ್ಪಿಸಿಕೊಂಡ ಅಚಲ ಸಮರ್ಪಣೆಯ ಸಂಕೇತವಾಗಿತ್ತು. ಅಲ್ಲದೆ, ಶಾಸ್ತ್ರೀಜಿಯವರ ಐತಿಹಾಸಿಕ ಘೋಷಣೆಯಾದ ಜೈ ಜವಾನ್, ಜೈ ಕಿಸಾನ್ ಇಡೀ ದೇಶದಾದ್ಯಂತ ಇಂದಿಗೂ ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತ-ಉಜ್ಬೇಕಿಸ್ತಾನ್ ಮಧ್ಯೆ ಬಿಗ್ ಡೀಲ್!
ದೀರ್ಘಾವಧಿಯ ಯುರೇನಿಯಂ ಪೂರೈಕೆಗೆ ಸಮ್ಮತಿ