ಫ್ರಾನ್ಸ್‌ನ ಎವಿಯನ್ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, ಲೆಬನಾನ್‌ನ ಹಿಜ್ಬುಲ್ಲಾ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್‌ನಿಂದ ಸಾಧ್ಯವಾಗದಿದ್ದರೆ, ಆ ಕೆಲಸವನ್ನು ಸಿರಿಯಾ ದೇಶವೇ ನೋಡಿಕೊಳ್ಳಲಿದೆ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸುದೀರ್ಘ ಸೇನಾ ಕಾರ್ಯಾಚರಣೆ ಮತ್ತು ಅಲ್ಲಿ ಸಾಯುತ್ತಿರುವ ಅಮಾಯಕರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಟ್ರಂಪ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.