ಇರಾನ್ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಕಳೆದ 36 ವರ್ಷಗಳಿಂದ ಇಸ್ಲಾಮಿಕ್ ಗಣರಾಜ್ಯದ ಪರಮೋಚ್ಚ ಅಧಿಕಾರ ನಡೆಸಿದ್ದ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮಗಳು ಜುಲೈ 4 ರಿಂದ ಆರಂಭವಾಗಲಿವೆ. ಜುಲೈ 7 ರಂದು ಟೆಹ್ರಾನ್ನ ದಕ್ಷಿಣದಲ್ಲಿರುವ ಪವಿತ್ರ ನಗರವಾದ ಕೋಮ್ನಲ್ಲಿ ವಿಶೇಷ ಧಾರ್ಮಿಕ ಪ್ರಾರ್ಥನೆಗಳು ನಡೆಯಲಿದ್ದು, ಅಂತಿಮವಾಗಿ ಜುಲೈ 9 ರಂದು ಅವರ ತವರು ನಗರಿ ಹಾಗೂ ಈಶಾನ್ಯ ಇರಾನ್ನ ಪವಿತ್ರ ನಗರವಾಗಿರುವ ಮಶಾದ್ನಲ್ಲಿ ಪಾರ್ಥಿವ ಶರೀರವನ್ನು ದಫನ್ ಮಾಡಲಾಗುವುದು.