ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ಭಾರತ-ಅಬುಧಾಬಿ ವಿಮಾನ ಟಿಕೆಟ್ ದರ ಭಾರಿ ಏರಿಕೆ! Flight Price
ಸಾಂದರ್ಭಿಕ ಚಿತ್ರ
Published on:
Copied
Follow Us
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಮೆರಿಕದ ಹಸ್ತಕ್ಷೇಪದ ಭೀತಿಯು ಜಾಗತಿಕ ವಿಮಾನಯಾನ (Flight Price) ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದಾಗ್ಯೂ, ಯುಎಇಯಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು ಮನೆಗೆ ಮರಳಲು ಕಾಯುತ್ತಿರುವುದರಿಂದ ಭಾರತವು ಅಬುಧಾಬಿಗೆ ಮತ್ತು ಅಲ್ಲಿಂದ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದೆ.
ಆದರೆ, ಹೆಚ್ಚಿನ ಬೇಡಿಕೆ, ಸೀಮಿತ ಸೇವೆಗಳು ಮತ್ತು ಜೆಟ್ ಇಂಧನ ಬೆಲೆಯಲ್ಲಿ ತೀವ್ರ ಏರಿಕೆಯಿಂದಾಗಿ ಟಿಕೆಟ್ ಬೆಲೆಗಳು ಗಗಕ್ಕೇರಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿದುಬಂದಿದೆ.
ಅಬುಧಾಬಿಯಿಂದ ದೆಹಲಿಗೆ ವಿಮಾನಗಳು ಲಭ್ಯವಿದೆಯೇ?
ಸಾಮಾನ್ಯ ದಿನಗಳಲ್ಲಿ ಹತ್ತಾರು ವಿಮಾನಗಳು ಸಂಚಾರ ನಡೆಸುತ್ತಿದ್ದ ಮಾರ್ಗಗಳಲ್ಲಿ ಕೇವಲ ಒಂದರಿಂದ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದು, ಟಿಕೆಟ್ ಬೆಲೆಗಳು ಸಹ ಗಗನ್ನಕ್ಕೇರಿದೆ. ಇದರಿಂದ ತುರ್ತಾಗಿ ಮನೆಗೆ ಮರಳಲು ಇಚ್ಛಿಸುವವರು ಸಾಮಾನ್ಯಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮಾರ್ಚ್ 12-18 ರವರೆಗೆ ಅಬುಧಾಬಿಯಿಂದ ದೆಹಲಿಗೆ ವಿಮಾನ ದರಗಳು
ಮಾರ್ಚ್ 12: ಎತಿಹಾದ್ ನಿಂದ ಒಂದೇ ವಿಮಾನ ಲಭ್ಯವಿದ್ದು, ಇದರ ಟಿಕೆಟ್ ಬೆಲೆ ಬರೋಬ್ಬರಿ 54,166 ರೂಪಾಯಿ. ಗೂಗಲ್ ಫ್ಲೈಟ್ಸ್ ಅಂಕಿಅಂಶಗಳ ಪ್ರಕಾರ, 10 ಸಾವಿರದಿಂದ 21,500 ರೂ. ಇರುತ್ತಿತ್ತು. ಆದರೆ, ಈಗಿನ ದರವು ಸಾಮಾನ್ಯಕ್ಕಿಂತ ಸುಮಾರು 5 ಪಟ್ಟು ಹೆಚ್ಚಾಗಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 13: ಎತಿಹಾದ್‌ನ ಆರ್ಥಿಕ ದರ್ಜೆಯ ವಿಮಾನವು ಪ್ರಸ್ತುತ ಒಂದೇ ಒಂದು ವಿಮಾನ ಟಿಕೆಟ್‌ಗೆ ಲಭ್ಯವಿದ್ದು, ಅದರ ಪ್ರಸ್ತುತ ಟಿಕೆಟ್‌ನ ಬೆಲೆ 43,658 ರೂ. ಆಗಿದೆ.
ಮಾರ್ಚ್ 14: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಎತಿಹಾದ್ ನೇರ ವಿಮಾನಗಳನ್ನು ನೀಡುತ್ತಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ದರ 39,285 ರೂ.ಗಳಾಗಿದ್ದರೆ, ಎತಿಹಾದ್‌ನ ವಿಮಾನದ ಬೆಲೆ 69,678 ರೂ.ಗಳಾಗಿವೆ.
ಮಾರ್ಚ್ 15: ಭಾನುವಾರದಂದು ಕೇವಲ ಒಂದು ಎತಿಹಾದ್ ವಿಮಾನ ಮಾತ್ರ ಲಭ್ಯವಿದೆ, ಇದರ ಬೆಲೆ ಬರೋಬ್ಬರಿ 41,907 ರೂ. ಆಗಿದೆ.
ಮಾರ್ಚ್ 16: ಇಂಡಿಗೋ 44,283 ರೂ. ಬೆಲೆಯ ವಿಮಾನ ಟಿಕೆಟ್ ನೀಡುತ್ತಿದ್ದರೆ, ಎತಿಹಾದ್ ವಿಮಾನ ಟಿಕೆಟ್ ಬೆಲೆ 69,678 ರೂ ಆಗಿದೆ.
ಮಾರ್ಚ್ 17: ಇಂಡಿಗೋ 59,245 ರೂ.ಗಳ ನೇರ ವಿಮಾನವನ್ನು ನೀಡುತ್ತಿದ್ದರೆ, ಎತಿಹಾದ್ ವಿಮಾನವು 69,678 ರೂ.ಗಳಿಗೆ ಲಭ್ಯವಿದೆ.
ಮಾರ್ಚ್ 18: ಇಂಡಿಗೋ ವಿಮಾನವು 59,245 ರೂ.ಗಳ ನೇರ ವಿಮಾನವನ್ನು ನೀಡುತ್ತಿದ್ದರೆ, ಎತಿಹಾದ್ ವಿಮಾನದ ಬೆಲೆ 69,678 ರೂ ಆಗಿದೆ (ಏಜೆನ್ಸೀಸ್).