'ಇದು ಟ್ರೈಲರ್​​ ಪಿಕ್ಚರ್ ಅಭಿ ಬಾಕಿ ಹೈ' ಶಾರುಖ್ ಖಾನ್ ಡೈಲಾಗ್​​​ ಹೇಳಿ ಅಮೆರಿಕಕ್ಕೆ Iran ವಾರ್ನಿಂಗ್

Iran Warning to America
Iran Warning to America
Published on

ಪ್ರಮುಖ ಮುಖ್ಯಾಂಶಗಳು

  • ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ದಿಗ್ಬಂಧನಕ್ಕೆ ಇರಾನ್ ತಿರುಗೇಟು.
  • "ಪಿಕ್ಚರ್ ಅಭಿ ಬಾಕಿ ಹೈ" ಎನ್ನುವ ಮೂಲಕ ಯುದ್ಧದ ಮುನ್ಸೂಚನೆ ನೀಡಿದ ಇರಾನ್
  • ಇರಾನ್ ನೌಕಾಪಡೆ ಬಗ್ಗೆ ಟ್ರಂಪ್ ಹೇಳಿಕೆಗೆ ವ್ಯಂಗ್ಯದ ಪ್ರತಿಕ್ರಿಯೆ
Iran Warning: ಇದು ಟ್ರೈಲರ್​​ ಅಷ್ಟೇ, ಪಿಕ್ಚರ್​ ಇನ್ನೂ ಬಾಕಿ ಇದೆ. ಹೀಗೆ ಬಾಲಿವುಡ್​ನ ಬಾದ್​ ಶಾ ಶಾರುಖ್​ ಖಾನ್​ ಡೈಲಾಗ್​​ ಹೊಡೆದು ಇರಾನ್​ ವಾರ್ನಿಂಗ್​ ಕೊಟ್ಟಿದ್ದು ಯಾರಿಗೆ ಗೊತ್ತ ದೊಡ್ಡಣ ಅಮೆರಿಕಗೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇ್ರಸೇಲ್ ​ಜಂಟಿಯಾಗಿ ಇರಾನ್​​ನ ಪರಮಾಣು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದವು. ಮೂರ್ನಾಲ್ಕು ವಾರ ಕಳೆದರೂ ಸಹ ಈ ಯುದ್ಧ ಶೀಘ್ರವೇ ಅಂತ್ಯ ಕಾಣುವ ಯಾವ ಲಕ್ಷಣ ಕಾಣುತ್ತಿಲ್ಲ. ಇತ್ತ ಭಾನುವಾರ ಪಾಕಿಸ್ತಾನದಲ್ಲಿ ನಡೆದ ಎರಡು ರಾಷ್ಟ್ರಗಳ ಸಂಧಾನ ಮಾತುಕತೆಯೂ ಮುರಿದು ಬಿದ್ದಿದೆ. ಆ ಬೆನ್ನಲ್ಲೇ ಅಮೆರಿಕವು ಹೊರ್ಮುಜ್​ ಜಲಸಂಧಿ ದಿಗ್ಬಂಧಿಸಿದ ಬೆನ್ನಲ್ಲೇ ಇರಾನ್​ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಡೈಲಾಗ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಶಾರುಖ್​ ಡೈಲಾಗ್​ ಹೊಡೆದ ಇರಾನ್​​

ಮುಂಬೈನಲ್ಲಿರುವ ಇರಾನ್‌ನ ಕಾನ್ಸುಲೇಟ್ ಜನರಲ್, ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಲು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪ್ರಸಿದ್ಧ ಸಿನಿಮಾ ಸಂಭಾಷಣೆಯನ್ನು ಬಳಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಯಾವಾಗಲೂ ಇರಾನ್​ನ ನೌಕಾಪಡೆ ನಶಿಸಿದೆ ಎಂದು ಟೀಕೆ ಮಾಡುತ್ತಿರುತ್ತಾರೆ. ಆದರೆ, ಈ ಹೇಳಿಕೆ ನಿಜಕ್ಕೂ ತಮಾಷೆಯಂತೆ ಕಾಣುತ್ತದೆ. ನಮ್ಮ ನೌಕಾ ಪಡೆ ಜೀನು ನೊಣಗಳಂತೆ ಯುದ್ಧಕ್ಕೆ ಸಜ್ಜಾಗಿದೆ. ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಸಿನಿಮಾ ಇನ್ನೂ ಬಾಕಿ ಇದೆ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಇರಾನ್​​ ವಾರ್ನಿಂಗ್ ಏನು?

ಅಮೆರಿಕವು ಕಾರ್ಯತಂತ್ರದ ದೃಷ್ಟಿಯಿಂದ ಹೊರ್ಮುಜ್​​ ಜಲಸಂಧಿಯನ್ನು ನಿರ್ಬಂಧಸಿದೆ. ಇರಾನ್​ನ ಯಾವುದೇ ಹಡಗುಗಳು ಬಂದರಿನ ಮೂಲಕ ಸಾಗುವಂತಿಲ್ಲ. ಇರಾನ್​ ದೇಶದಿಂದ ಯಾವುದೇ ಹಡಗು ಹೊರಬರಲು ಬಿಡುವುದಿಲ್ಲ. ಹೊರ್ಮುಜ್​ ಜಲಸಂಧಿಗೆ ದಿಗ್ಬಂಧನ ಹಾಕಲಾಗುವುದು. ಯಾವುದೇ ದೇಶದ ಹಡಗು ಹೊರಬರಲು ಅಥವಾ ಬೇರೆ ಕಡೆಗಳಿಂದ ಇರಾನ್​ ಬಂದರನ್ನು ತಲುಪಲು ಬಿಡೊಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ಕೊಟ್ಟಿದ್ದರು.
ನಮ್ಮ ಬಂದರುಗಳಿಗೆ ಅಮೆರಿಕ ದಿಗ್ಬಂಧನ ವಿಧಿಸುವುದನ್ನು ಕಡಲ್ಗಳ್ಳತನ ಎಂದು ಭಾವಿಸಲಾಗುತ್ತದೆ.ಇದಕ್ಕೆ ಪ್ರತಿಯಾಗಿ ಕೊಲ್ಲಿ ದೇಶಗಳ ಯಾವ ಬಂದರುಗಳೂ ಸುರಕ್ಷಿತವಾಗಿರಲು ಬಿಡೋದಿಲ್ಲ ಎಂದು ಇರಾನ್ ಹೇಳಿತ್ತು.
ಈ ಕ್ರಮದಿಂದಾಗಿ ಇರಾನ್​ ವ್ಯಾಪಾರ ಮತ್ತು ನೌಕಾ ಸಂಚಾರಕ್ಕೆ ದೊಡ್ಡ ಹೊಡೆತ ನೀಡುವ ಪ್ರಯತ್ನ ಎಂದು ಹೇಳಿದೆ.

ಟ್ರಂಪ್​​ ವಿರುದ್ಧ ಲೇವಡಿ

ಪ್ರತಿಬಾರಿಯು ಅಮೆರಿಕ ಅಧ್ಯಕ್ಷ ಟ್ರಂಪ್​​​ ಇರಾನ್​ನ ನೌಕಾಪಡೆ ವಿನಾಶ ಕಾಲದಲ್ಲಿದೆ ಎಂದು ವ್ಯಂಗ್ಯವಾಡುತ್ತಿದ್ದರು. ಈ ಬಗ್ಗೆ ಉಲ್ಲೇಖಿಸಿ ಇರಾನ್​ ಮಾತನಾಡಿದ್ದು, ತಮ್ಮ ನೌಕಾಪಡೆಯನ್ನು ಕೆಂಪು ಜೇನುನೊಣ ಎಂದು ಕರೆದುಕೊಂಡಿದ್ದು, ಸಮುದ್ರದಲ್ಲಿ ಇವುಗಳು ಅತ್ಯಂತ ವೇಗವಾಗಿ ಚಲಿಸಬಲ್ಲವು ಮತ್ತು ಶತ್ರುಗಳ ದೊಡ್ಡ ಹಡಗುಗಳನ್ನು ಕ್ಷಣಾರ್ಧದಲ್ಲಿ ಸುತ್ತುವರಿಯಬಲ್ಲವು. ಹೊರ್ಮುಜ್ ಜಲಸಂಧಿಯಂತಹ ಕಿರಿದಾದ ಪ್ರದೇಶದಲ್ಲಿ ಇಂತಹ ಸಣ್ಣ ಬೋಟ್‌ಗಳು ದೊಡ್ಡ ಯುದ್ಧನೌಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದಿದೆ.

ಭಾನುವಾರ ಸಂಧಾನ ಏನಾಯ್ತು?

ಇರಾನ್​ ಮತ್ತು ಅಮೆರಿಕ ನಡುವಣ ಸಂಘರ್ಷ ನಿಲ್ಲಿಸಲು ಪಾಕಿಸ್ತಾನ ಭಾನುವಾರ ಸಂಧಾನ ಕಾರ್ಯಕ್ರಮ ನಡೆಸಿತ್ತು. ಆದರೆ, ಇದು ವಿಫಲವಾಯ್ತು. ಇರಾನ್​ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈ ಬಿಡ್ಬೇಕು ಎನ್ನುವುದು ಅಮೆರಿಕ ಷರತ್ತು, ಅಣು ಯೋಜನೆ, ಹೊರ್ಮುಜ್​​ ಜಲಸಂಧಿಮುಕ್ತ ಸೇರಿದಂತೆ ಹಲವಾರು ಷರತ್ತಿಗೆ ಬದ್ಧ ಉತ್ತರ ಸಿಗಲಿಲ್ಲ ಈ ಕಾರಣದಿಂದಾಗಿ ಮಾತುಕತೆ ಮುರಿದು ಬಿತ್ತು, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net