ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಆಶಾಕಿರಣವಾಗಿದ್ದ ಇಸ್ಲಾಮಾಬಾದ್ ಶಾಂತಿ ಮಾತುಕತೆ ಈಗ ಅಯೋಮಯ ಸ್ಥಿತಿಗೆ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಇರಾನ್ ವಿರುದ್ಧ ಕದನ ವಿರಾಮ ಉಲ್ಲಂಘನೆಯ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಜಾಗತಿಕ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ. ಬುಧವಾರದ ಗಡುವು ಹತ್ತಿರವಾಗುತ್ತಿದ್ದಂತೆಯೇ, ಇಡೀ ವಿಶ್ವದ ಕಣ್ಣು ಈಗ ಇಸ್ಲಾಮಾಬಾದ್ನತ್ತ ನೆಟ್ಟಿದೆ.