800ಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸುವುದನ್ನು ರದ್ದುಗೊಳಿಸಿದ ಇರಾನ್; ನಿರ್ಧಾರ ಶ್ಲಾಘಿಸಿದ ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಮುಂದುವರೆದಿದ್ದು, ಅಲ್ಲಿನ ಸೇನೆ ಈಗಾಗಲೇ ಸಾವಿರಾರು ಪ್ರತಿಭಟನಾಕಾರರನ್ನು ಕೊಂದಿದೆ. ಆದರೆ ಆಶ್ಷರ್ಯವೆಂಬಂತೆ​ ನಿನ್ನೆ 800ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಗಲ್ಲಿಗೆ ಹಾಕುವುದನ್ನು ರದ್ದುಗೊಳಿಸಲಾಗಿದೆ ಎಂದು ಇರಾನ್ ಹೇಳಿದೆ ಎಂದು ವರದಿಯಾಗಿದೆ.
ಈ ನಿರ್ಧಾರದ ಬಗ್ಗೆ ಇರಾನ್​ ಅನ್ನು ಅಭಿನಂದಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿನ್ನೆ ನಡೆಯಬೇಕಿದ್ದ ಎಲ್ಲಾ ನಿಗದಿತ 800ಕ್ಕೂ ಹೆಚ್ಚು ಪ್ರತಿಭಟನಾಕಾರರ ಗಲ್ಲಿಗೇರಿಸುವಿಕೆಗಳನ್ನು ಇರಾನ್ ನಾಯಕತ್ವ ರದ್ದುಗೊಳಿಸಿದೆ ಎಂಬ ಅಂಶವನ್ನು ನಾನು ತುಂಬಾ ಗೌರವಿಸುತ್ತೇನೆ. ಧನ್ಯವಾದಗಳು ಎಂದು ತಮ್ಮ ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ. 
ಆರ್ಥಿಕತೆ, ಧರ್ಮಾಂದತೆ ಸೇರಿ ಅನೇಕ ಅಂಶಗಳನ್ನು ವಿರೋಧಿಸಿ ಸ್ಥಳೀಯರು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ಹೋರಾಟ ಆರಂಭಿಸಿದ್ದಾರೆ. ಇಲ್ಲಿಯವರೆಗೆ ಅಲ್ಲಿ ಸುಮಾರರು 3 ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ ಎಂದು ಹಲವು ವರದಿಗಳು ಉಲ್ಲೇಖಿಸಿವೆ.
ಜೊತೆಗೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಂಧಿಸಿ ಅವರನ್ನು ದೇವರ ಶಿಕ್ಷೆ ಎಂಬ ಹೆಸರಿನಲ್ಲಿ ಗಲ್ಲಿಗೇರಿಸುವ ಬೆದರಿಕೆಯನ್ನು ಸರ್ಕಾರ ಒಡ್ಡಿತ್ತು. ಆದರೆ ಈ ನಿರ್ಧಾರದ ಬಗ್ಗೆ ಈ ಹಿಂದೆ ಟ್ರಂಪ್ ಕಿಡಿಕಾರಿದ್ದರು. ಸಾಮೂಹಿಕ ಗಲ್ಲಿಗೇರಿಸುವಿಕೆ ವಿರುದ್ಧ ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುವುದಾಗಿ ಎಚ್ಚರಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net