ಇಂಡಿಗೋ ವಿಮಾನಗಳ ಅವ್ಯವಸ್ಥೆ ಬಗ್ಗ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದ ರಾಹುಲ್ ಗಾಂಧಿ, ಇಂಡಿಗೋ ವೈಫಲ್ಯವು ಈ ಕೇಂದ್ರ ಸರ್ಕಾರದ ಏಕಸ್ವಾಮ್ಯ ಮಾದರಿಯ ಕೊಡುಗೆಯಾಗಿದೆ. ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಯಲ್ಲಿ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಾರೆ. ಭಾರತವು ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ. ಆದರೆ ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ ಎಂದು ಬರೆದಿದ್ದರು.