ಪುಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಆಪರೇಷನ್ ಸಿಂಧೂರ್‌ನ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ಜನರು ಒಪ್ಪಬಹುದು, ಒಪ್ಪದೇ ಇರಬಹುದು ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಒಂದೇ ಒಂದು ವಿಮಾನವೂ ಹಾರಲಿಲ್ಲ. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ, ಪಾಕಿಸ್ತಾನವು ಹೊಡೆದುರುಳಿಸುವ ಹೆಚ್ಚಿನ ಸಂಭವನೀಯತೆ ಇತ್ತು ಅದಕ್ಕಾಗಿಯೇ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು ಎಂದು ಹೇಳಿದ್ದಾರೆ.