"ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು ಜುಲೈ 15ರಿಂದ ಜಾರಿಗೆ ಬರಲಿದೆ. ಇದು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಹೊಸ ವೇಗ ನೀಡಲಿದೆ" ಎಂದು ಮೋದಿ ತಿಳಿಸಿದ್ದಾರೆ. ಈ ಒಪ್ಪಂದದಿಂದ ಭಾರತದ ರೈತರು, ಕಾರ್ಮಿಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಸ್ಟಾರ್ಟ್ಅಪ್ಗಳು ಹಾಗೂ ಹೊಸ ಆವಿಷ್ಕಾರ ಮಾಡುವ ಯುವ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ.