ಸಂತ್ರಸ್ತರಿಗೆ ನಮನ ಸಲ್ಲಿಸುವ ಸಲುವಾಗಿ ಅಮೆರಿಕದಲ್ಲಿ ಶುಕ್ರವಾರದಂದು ಪುಷ್ಪಗುಚ್ಛ ಅರ್ಪಣೆ, ಧ್ವಜಾರೋಹಣ, ಮೌನಾಚರಣೆ, ಜಾಗರಣೆ ಹಾಗೂ ಸಂತ್ರಸ್ತರ ಹೆಸರುಗಳ ವಾಚನ ಸೇರಿದಂತೆ ಹಲವು ಸ್ಮಾರಕ ವಿಧಿವಿಧಾನಗಳು ನಡೆಯಲಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪೆಂಟಗನ್ನಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ವಾರದ ಆರಂಭದಲ್ಲಿ ವಾಷಿಂಗ್ಟನ್ನಲ್ಲಿ ನಡೆದ 9/11 ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ಇತಿಹಾಸದ ಹಾದಿಯಲ್ಲಿ, ಸಮಯವನ್ನು ಘಟನೆಗೆ ಮೊದಲು ಮತ್ತು ನಂತರ ಎಂದು ವಿಭಜಿಸುವ ಕೆಲವು ಕ್ಷಣಗಳು ಇರುತ್ತವೆ ಎಂದು ಹೇಳಿದ್ದರು(ಏಜೆನ್ಸೀಸ್).