ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಫೆಬ್ರವರಿ 3 ರಂದು ನಡೆದ ಭೀಕರ ರಸ್ತೆ ಅಪಘಾತವೊಂದು ಈಗ ಪೊಲೀಸ್ ಇಲಾಖೆ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯ ಅಮಾನವೀಯ ಮುಖವನ್ನು ಅನಾವರಣಗೊಳಿಸಿದೆ. ಅತಿವೇಗವಾಗಿ ಬಂದ ವಾಹನ ಡಿಕ್ಕಿಯಾಗಿ 23 ವರ್ಷದ ಸಾಹಿಲ್ ಧನೇಷ್ರಾ(Sahil Dhaneshra) ಎಂಬ ಯುವಕ ಮೃತಪಟ್ಟಿದ್ದು, ಈ ಘಟನೆಯ ನಂತರ ಆತನ ತಾಯಿ ಇನ್ಮಾ ಮಕನ್ ಅವರು ಮಾಡಿರುವ ಆರೋಪಗಳು ಸಮಾಜವನ್ನೇ ನಡುಗಿಸುವಂತಿವೆ.