ನಾನು ಲಾಲು ಜೀ ಮಗ; ನನ್ನ ವಿರುದ್ಧ ಕೋಮು ಶಕ್ತಿಗಳು ಎಷ್ಟೇ ಪಿತೂರಿ ಮಾಡಿದ್ರೂ ಹೆದರಲ್ಲ; ತೇಜಸ್ವಿ ಯಾದವ್ | Tejaswi Yadav
ಆರ್ಜೆಡಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆರ್ಜೆಡಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ತೇಜಸ್ವಿ ಯಾದವ್ ನೇಮಕ
ಕೋಮು ಶಕ್ತಿಗಳು ಎಷ್ಟೇ ಪಿತೂರಿ ಮಾಡಿದ್ರೂ ಅವರ ಬಳಿ ತಲೆಬಾಗಲ್ಲ
ಲಾಲು ರೀತಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಪಣ
ಪಾಟ್ನಾ: ನಾನು ಲಾಲು ಜಿ ಅವರ ಮಗ, ಮತ್ತು ನನ್ನ ವಿರುದ್ಧ ಕೋಮು ಶಕ್ತಿಗಳು ಎಷ್ಟೇ ಪಿತೂರಿಗಳನ್ನು ಮಾಡಿದ್ರೂ, ನಾನು ಅವರ ಮುಂದೆ ತಲೆಬಾಗುವುದಿಲ್ಲ.ಆದರೆ ಆರ್ಜೆಡಿಯ ಕಾರ್ಯಾಧ್ಯಕ್ಷನ ಜವಾಬ್ದಾರಿಗಳನ್ನು ಪೂರೈಸಲು ಬಲವಾದ ಸಂಕಲ್ಪ ಮತ್ತು ಎಲ್ಲರ ಸಹಕಾರದೊಂದಿಗೆ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.
ಆರ್ಜೆಡಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಶನಿವಾರ(ಫೆ. 07) ಪಾಟ್ನಾದ ಪಕ್ಷದ ಕಚೇರಿಯಲ್ಲಿ ಮಾತನಾಡಿರುವ ಅವರು, ಇದೇ ಮೊದಲ ಬಾರಿಗೆ ನನಗೆ ಸಂಘಟನಾತ್ಮಕ ಜವಾಬ್ದಾರಿ ನೀಡಲಾಗಿದೆ. ತಂದೆ ಮತ್ತು ಪಕ್ಷದ ಸಂಸ್ಥಾಪಕ ಲಾಲು ಪ್ರಸಾದ್ ಅವರಂತೆಯೇ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
2025ರ ಬಿಹಾರ ಚುನಾವಣೆಯಲ್ಲಿ ಸೋತ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜಾಪ್ರಭುತ್ವದ ವಿರುದ್ಧ ನಡೆಯುತ್ತಿರುವ ಪಿತೂರಿಯ ವಿರುದ್ಧ ನಾವೆಲ್ಲರೂ ಜಾಗರೂಕರಾಗಿರಬೇಕು. ಬಿಹಾರ ಚುನಾವಣೆಯಲ್ಲಿ ಜನತಂತ್ರವನ್ನು ಧನತಂತ್ರವಾಗಿ ಪರಿವರ್ತಿಸಲಾಯಿತು. ಆಡಳಿತ ಯಂತ್ರದ ಮೂಲಕ ಮೋಸದಿಂದ ಚುನಾವಣೆಯನ್ನು ಗೆಲ್ಲಲಾಯಿತು. ಆದಾಗ್ಯೂ, ನಮ್ಮ ಕಾರ್ಯಕರ್ತರ ನೈತಿಕತೆ ತುಂಬಾ ಪ್ರಬಲವಾಗಿದೆ. ನಾವು ಅದೇ ಶಕ್ತಿಯೊಂದಿಗೆ ಮತ್ತೆ ಹಿಂತಿರುಗುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ, ಅವರು ಬಿಹಾರದ ಜನರ ಮುಖ್ಯಮಂತ್ರಿಯಲ್ಲ, ಅಧಿಕಾರಿಗಳಿಗೆ ಮಾತ್ರ ಮುಖ್ಯಮಂತ್ರಿ. ನಿತೀಶ್ ಅವರು ಜನರಿಗೆ ಯಾವುದೇ ಕೆಲಸ ಮಾಡಿಲ್ಲ, ಈ ಡಬಲ್ ಎಂಜಿನ್ ಸರ್ಕಾರದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).