70ರ ಇಳಿವಯಸ್ಸಿನಲ್ಲೂ 30ರ ಯುವಕನಂತೆ ಕಾಣುವ ರಷ್ಯಾ ಅಧ್ಯಕ್ಷ ಪುಟಿನ್ ಫಿಟ್​ನೆಸ್​ ಗುಟ್ಟೇನು? Vladimir Putin

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Published on

ಪ್ರಮುಖ ಮುಖ್ಯಾಂಶಗಳು

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈಗ 73 ವರ್ಷ ವಯಸ್ಸಾಗಿದೆ
  • ಇಳಿವಯಸ್ಸಿನಲ್ಲೂ ದೈಹಿಕವಾಗಿ 30ರ ಹರೆಯದ ಯುವಕನಂತೆ ಪುಟಿನ್​ ಕಾಣುತ್ತಾರೆ
  • ಪುಟಿನ್ ಅವರು ತಮ್ಮ ಫಿಟ್​ನೆಸ್​ ಖ್ಯಾತಿಯನ್ನು ಒಂದೇ ರಾತ್ರಿಯಲ್ಲಿ ಗಳಿಸಿದಲ್ಲ
  • ರಷ್ಯಾ ಅಧ್ಯಕ್ಷ ಪುಟಿನ್​ ಫಿಟ್​ನೆಸ್​ ಹಿಂದೆ ಸಾಕಷ್ಟು ಪರಿಶ್ರಮ ಇದೆ
Vladimir Putin : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗ 70ರ ಆರಂಭದಲ್ಲಿದ್ದಾರೆ. ಆದರೂ ಅವರು ದೈಹಿಕವಾಗಿ 30ರ ಹರೆಯದ ಯುವಕನಂತೆ ಗಟ್ಟಿಮುಟ್ಟಾಗಿ ಕಾಣಿಸುತ್ತಾರೆ. ಅವರ ಈ ಫಿಟ್​ನೆಸ್​ ಗುಟ್ಟೇನು ಅಂತ ಪ್ರಶ್ನಿಸಿದಾಗ, ಅವರು ನಿತ್ಯವು ಮಾಡುವ ದೈಹಿಕ ಚಟಿವಟಿಕೆ ಉತ್ತರವಾಗಿ ನಿಲ್ಲುತ್ತದೆ.
ಹೌದು, ಪುಟಿನ್ ಅವರು ದಿನನಿತ್ಯ ಕುದುರೆ ಸವಾರಿ, ಈಜು, ಸಮರ ಕಲೆಗಳ ಜತೆಗೆ ಶ್ರಮದಾಯಕ ವ್ಯಾಯಾಮಗಳನ್ನು ಸಹ ಮಾಡುತ್ತಾರೆ. ಪುಟಿನ್​ ನಿತ್ಯವು ಮಾಡುವಂತಹ ಕೆಲಸವನ್ನು ಇಂದಿನ ಯುವಕರು ಮಾಡಲು ಸಹ ತುಂಬಾ ಕಷ್ಟಪಡುತ್ತಾರೆ. ಗಮನಾರ್ಹ ಸಂಗತಿ ಏನೆಂದರೆ, ಪುಟಿನ್ ಅವರ ಫಿಟ್​ನೆಸ್​ ದಿನಚರಿಯನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಹಾಗಾದರೆ ರಷ್ಯಾ ಅಧ್ಯಕ್ಷರ ಫಿಟ್​ನೆಸ್​ ಗುಟ್ಟೇನು ಅನ್ನೋದನ್ನು ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಅಂದಹಾಗೆ, ಪುಟಿನ್ ಅವರು ತಮ್ಮ ಫಿಟ್​ನೆಸ್​ ಖ್ಯಾತಿಯನ್ನು ಒಂದೇ ರಾತ್ರಿಯಲ್ಲಿ ಗಳಿಸಿದಲ್ಲ, ಇದಕ್ಕಾಗಿ ಅನೇಕ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹಿಂದೊಮ್ಮೆ ಅವರ ಶರ್ಟ್‌ಲೆಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲ್ಲರು ಅವರ ಫಿಟ್​ನೆಸ್​ ನೋಡಿ ಮೂಕವಿಸ್ಮಿತರಾಗಿದ್ದರು. ಪುಟಿನ್​ ಅವರ ಫಿಟ್​ನೆಸ್​ ಹಿಂದೆ ಎಷ್ಟು ಶ್ರಮ ಇದೆ ಅನ್ನೋದನ್ನು ತಿಳಿಯೋಣ.

ಶಕ್ತಿಗಾಗಿ ಜಿಮ್, ತ್ರಾಣಕ್ಕಾಗಿ ಈಜು

ಪುಟಿನ್ ಅವರು ತಮ್ಮ ಸ್ನಾಯುಗಳ ಬಲವರ್ಧನೆಗಾಗಿ ದಿನನಿತ್ಯ ಜಿಮ್‌ನಲ್ಲಿ ಬೆವರನ್ನು ಸುರಿಸುತ್ತಾರೆ. ಇದರ ಜೊತೆಗೆ ಪ್ರತಿದಿನ ಈಜುವ ಅಭ್ಯಾಸ ಸಹ ಅವರಿಗಿದೆ. ಪುಟಿನ್ ಅವರು ಚಿರ ಯುವಕನಂತೆ ಕಾಣಲು ಇವೇ ಕಾರಣ. 50 ವರ್ಷ ದಾಟಿದ ನಂತರ ಸ್ನಾಯುಗಳು ದುರ್ಬಲಗೊಳ್ಳುವುದು, ಮೂಳೆಗಳು ಕ್ಷೀಣಿಸುವುದು ಮತ್ತು ಚಯಾಪಚಯ ಕ್ರಿಯೆ ನಿಧಾನವಾಗುವ ಕಾರಣ ಪತ್ರಿಯೊಬ್ಬರು ದಿನನಿತ್ಯ ದೈಹಿಕ ಶ್ರಮದಲ್ಲಿ ತೊಡಗುವಂತೆ ಪುಟಿನ್ ಸಲಹೆ ನೀಡುತ್ತಾರೆ.

ಚಿಕ್ಕ ವಯಸ್ಸಿನಿಂದ ಸಮರ ಕಲೆ ಅಭ್ಯಾಸ

ಪುಟಿನ್ ಅವರು ತಮ್ಮ 14ನೇ ವಯಸ್ಸಿನಿಂದಲೂ ಜೂಡೋವನ್ನು ಅಭ್ಯಾಸ ಮಾಡುತ್ತಿದ್ದು, ಸಮರ ಕಲೆಯಲ್ಲಿ ಪುಟಿನ್​ ವಿಶೇಷ ಪರಿಣಿತಿ ಹೊಂದಿದ್ದಾರೆ. ಸಮರ ಕಲೆಗಳನ್ನು ನಿರಂತವಾಗಿ ಅಭ್ಯಾಸ ಮಾಡುವ ಮೂಲಕ ಇಳಿ ವಯಸ್ಸಿನಲ್ಲೂ ಸಹ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಪುಟಿನ್ ಸದೃಢರಾಗಿದ್ದಾರೆ.

ವಿಜ್ಞಾನ ಏನು ಹೇಳುತ್ತೆ?

ಪುಟಿನ್ ಅವರ ದಿನಚರಿಯನ್ನು 70 ವರ್ಷದವರು ಆರಂಭಿಸಲು ಕಷ್ಟವಾಗಿದ್ದು, ಯುವಕರಾಗಿದ್ದಾಗಿನಿಂದ ನಿರಂತರ ದೈಹಿಕ ತರಬೇತಿಯನ್ನು ಮಾಡುತ್ತಾ ಇದ್ದರೆ ಮಾತ್ರ ಪುಟಿನ್ ರೀತಿ ದೇಹವನ್ನು ಪಡೆಯಬಹುದು. ಹಾಗೆಯೇ ದೇಹದಲ್ಲಿನ ಶಕ್ತಿ ಮತ್ತು ಸಾಮರ್ಥ್ಯ ಎನ್ನುವುದು ವಂಶಪಾರಂಪರ್ಯದ ಮೇಲು ನಿರ್ಧರಿತವಾಗಿರುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ಇನ್ನು ದೈಹಿಕ ಕಾರ್ಯಕ್ಷಮತೆ ಎನ್ನುವುದು ಮಧ್ಯವಯಸ್ಸಿನಲ್ಲಿ ನಡೆಸುವ ಪ್ರಯೋಗವಲ್ಲ, ಬದಲಾಗಿ ಜೀವನದುದ್ದಕ್ಕೂ ಪಾಲಿಸುವಂತಹ ಬದ್ಧತೆ ಎಂದು ಪರಿಗಣಿಸುವ ಕೆಲವೇ ಜಾಗತಿಕ ನಾಯಕರಲ್ಲಿ ಪುಟಿನ್ ಕೂಡ ಒಬ್ಬರು. ಆದ್ದರಿಂದಲೇ ಅವರು ಈ ಇಳಿ ವಯಸ್ಸಿನಲ್ಲಿ ಸಹ ಯುವಕರು ನಾಚುವಂತೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net