ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿನ್ಹಾ, ನಾಳೆ ನಿಮ್ಮ ಜನ್ಮದಿನದ ಶುಭಾಶಯಗಳ ಪ್ರವಾಹದಲ್ಲಿ ನನ್ನ ಸಂದೇಶ ಕಳೆದುಹೋಗುವ ಮುನ್ನವೇ ನಿಮಗೆ ಮುಂಚಿತವಾಗಿ ಶುಭ ಹಾರೈಸುತ್ತಿದ್ದೇನೆ. ಸಖತ್ ಐಡಿಯಾ ಅಲ್ವೇ ಸರ್ಜಿ..? ನಮ್ಮ ಸ್ನೇಹಿತ, ಸಮಾಜದ ಬಂಧು ಹಾಗೂ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೂ ದೇವರು ಉತ್ತಮ ಆರೋಗ್ಯ, ಪ್ರೀತಿ, ಸಂತೋಷ, ಶಾಂತಿ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಸಿನ್ಹಾ ಬರೆದುಕೊಂಡಿದ್ದಾರೆ.