ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರತಿಯೊಂದು ಪ್ರಮುಖ ಪಕ್ಷವೂ ರಾಮ, ದೇವಾಲಯ, ರಥಯಾತ್ರೆ ಮತ್ತು ಸನಾತನ ಎಂಬ ಪದಗಳ ಸುತ್ತಲೇ ತಮ್ಮ ರಾಜಕೀಯ ಭಾಷೆಯನ್ನು ರೂಪಿಸಿಕೊಳ್ಳುತ್ತಿವೆ. ಪ್ರತಿಪಕ್ಷಗಳು ಚಂದಾ ದುರುಪಯೋಗದ ವಿಷಯದಲ್ಲಿ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದರೂ, ಚುನಾವಣೆ ನಡೆಯಬೇಕಾದ ವೇದಿಕೆ ಮತ್ತು ವಿಚಾರವನ್ನು ನಿರ್ಧರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿರೋಧ ಪಕ್ಷಗಳು ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ, ಬಿಜೆಪಿ ಹೆಣೆದ ಹಿಂದುತ್ವದ ಅಂಗಳದಲ್ಲೇ ಇಳಿದು ಆಟವಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ. 2027ರ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಜಾತೀಯ ಸಮೀಕರಣಗಳ ಮೇಲೆ ನಿರ್ಧಾರವಾಗಬಹುದು, ಆದರೆ ಸದ್ಯದ ಮಟ್ಟಿಗೆ ರಾಜಕೀಯದ ಅಜೆಂಡಾ ನಿರ್ಧರಿಸುವಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ ಅಂತಲೇ ಹೇಳಬಹುದು(ಏಜೆನ್ಸೀಸ್).