ಮತ್ತೊಂದೆಡೆ, ಚುನಾವಣಾ ಕಣದಿಂದ ಅರ್ಧದಲ್ಲೇ ನಾಟಕೀಯವಾಗಿ ಹಿಂದೆ ಸರಿದಿದ್ದ ಟಿಎಂಸಿ ಅಭ್ಯರ್ಥಿ, ಸ್ವಯಂಘೋಷಿತ 'ಪುಷ್ಪ' ಜಹಾಂಗೀರ್ ಖಾನ್ ಕೇವಲ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟು ತೀವ್ರ ಮುಖಭಂಗ ಅನುಭವಿಸಿದ್ದಾರೆ. 22 ಸುತ್ತುಗಳ ಸುದೀರ್ಘ ಮತ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ 1,49,666 ಮತಗಳನ್ನು ಪಡೆದು ಬೀಗಿದರೆ, ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ 40,645 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ (10,084 ಮತಗಳು) ಮೂರನೇ ಸ್ಥಾನ ಪಡೆದಿದ್ದಾರೆ.