ಜೊಹಾನೆಸ್‌ಬರ್ಗ್ ಬೀದಿಗಳಲ್ಲಿ ಗುಂಡಿನ ಸುರಿಮಳೆ: 11 ಜನರು ಬಲಿ, 10 ಮಂದಿಗೆ ಗಂಭೀರ ಗಾಯ!
Johannesburg
Published on:
Copied
Follow Us
ಜೊಹಾನೆಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೊಹಾನೆಸ್‌ಬರ್ಗ್ ಸಮೀಪದ ಬೆಕ್ಕರ್ಸ್‌ಡಾಲ್ (Bekkersdal) ಟೌನ್‌ಶಿಪ್‌ನಲ್ಲಿ ರಾತ್ರಿ ಅಜ್ಞಾತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 11 ಜನರನ್ನು ಬಲಿಯಾಗಿದ್ದು, 10 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಭಾನುವಾರ ವರದಿಯಾಗಿದೆ.
ಈ ಘಟನೆಯು ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಸಾಮೂಹಿಕ ಗುಂಡಿನ ದಾಳಿಯಾಗಿದೆ (ಮೊದಲನೆಯದು ಡಿಸೆಂಬರ್ 6ರಂದು ಪ್ರಿಟೋರಿಯಾ ಸಮೀಪದಲ್ಲಿ 12 ಜನರು ಸಾವನ್ನಪ್ಪಿದ್ದರು). ಬೆಕ್ಕರ್ಸ್‌ಡಾಲ್‌ನ ಕ್ವಾ ನಾಕ್ಸೊಲೊ ಟ್ಯಾವರ್ನ್ (ತವರ್ನ್ ಅಥವಾ ಅನಧಿಕೃತ ಬಾರ್) ಸಮೀಪದ ಬೀದಿಗಳಲ್ಲಿ ಘಟನೆಯ ನಡೆದಿದೆ.
ಬಂದೂಕುಧಾರಿಗಳು ಟ್ಯಾವರ್ನ್‌ನ ಗ್ರಾಹಕರು ಮತ್ತು ಬೀದಿಯಲ್ಲಿ ನಡೆದುಕೊಂಡಿದ್ದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಯಾವುದೇ ಬಂಧನಗಳಿಲ್ಲ, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಜಗತ್ತಿನಲ್ಲೇ ಅತಿ ಹೆಚ್ಚು ಕೊಲೆ ದರ ಹೊಂದಿದ ದೇಶಗಳಲ್ಲಿ ಒಂದು – 2024ರಲ್ಲಿ 26,000ಕ್ಕೂ ಹೆಚ್ಚು ಕೊಲೆಗಳು ನಡೆದಿವೆ. ಅನಧಿಕೃತ ಬಾರ್‌ಗಳು ಮತ್ತು ಗ್ಯಾಂಗ್ ಹಿಂಸೆ ಇಂತಹ ಸಾಮೂಹಿಕ ದಾಳಿಗಳಿಗೆ ಮುಖ್ಯ ಕಾರಣಗಳು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ,(ಏಜೆನ್ಸೀಸ್).