ದಿನ ಕಳೆದಂತೆ ಇರಾನ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳಲ್ಲಿ ಅನೇಕ ಮಂದಿ ಸಾವಿಗೀಡಾಗಿದ್ದು, 18,400ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳು ತಾರಕಕ್ಕೇರಿದ್ದು, ಇರಾನ್‌ನಲ್ಲಿ ಜನರು ಸರ್ಕಾರವನ್ನು ಭಾರೀ ವಿರೋಧಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕ, ಮಧ್ಯಪ್ರವೇಶಿಸುವುದಾಗಿಯೂ ಇರಾನ್ಗೆ ಈಗಾಗಲೇ ಎಚ್ಚರಿಸಿದೆ.