ಇತ್ತ ಪ್ರಧಾನ್ಗೆ ಭವ್ಯ ಸ್ವಾಗತ ಸಿಗುತ್ತಿದ್ದಂತೆ, ಒಂದು ದಿನದ ಹಿಂದಿನವರೆಗೂ ರಾಜೀನಾಮೆಗೆ ಆಗ್ರಹಿಸಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಅವರ ಬಳಿಗೆ ತೆರಳಿ ರಾಜೀನಾಮೆ ನೀಡಿದ್ದಕ್ಕಾಗಿ ಸಹಾನುಭೂತಿ ವ್ಯಕ್ತಪಡಿಸಿದರು. ಇದೆಲ್ಲ ನಡೆಯುತ್ತಿರುತ್ತದೆ ಎಂದು ಜೈರಾಮ್ ರಮೇಶ್, ಪ್ರಧಾನ್ಗೆ ಹೇಳಿದರು. ಅದಕ್ಕೆ ಪ್ರಧಾನ್, ಏನೂ ಆಗಿಲ್ಲ, ನಾನು ಬೀದಿ ಹೋರಾಟಗಾರ (ಸ್ಟ್ರೀಟ್ ಫೈಟರ್), ಎಸಿ ರೂಮ್ ಕಾರ್ಯಕರ್ತನಲ್ಲ, ಎಂದು ತಿರುಗೇಟು ನೀಡಿದರು.