ಮುಂಬೈ: ದೇಶದ ಕಮಾಡಿಟಿ ಮಾರುಕಟ್ಟೆಯಲ್ಲಿ (MCX) ಇಂದು ಹೂಡಿಕೆದಾರರು ಅಕ್ಷರಶಃ ದಿಗಿಲುಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಏರಿಕೆ ಕಾಣುತ್ತಿದ್ದ ಹಳದಿ(Gold-Silver Price Drop) ಲೋಹದ ಬೆಲೆ ಇಂದು ಹಠಾತ್ ಕುಸಿತ ಕಂಡಿದೆ. ಬರೋಬ್ಬರಿ ಶೇ. 10 ರಷ್ಟು ಬೆಳ್ಳಿ ಬೆಲೆ ಕುಸಿದಿದ್ದರೆ, ಚಿನ್ನದ ಬೆಲೆಯು 10 ಗ್ರಾಂಗೆ ₹5,000 ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಇದು ಆಭರಣ ಪ್ರಿಯರಿಗೆ ಸಂತಸ ತಂದಿದ್ದರೆ, ಹೂಡಿಕೆದಾರರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.