ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಇತ್ತೀಚಿಗೆ ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಪ್ಲಿಪ್ಕಾರ್ಟ್, ಬ್ಲಿಂಕಿಟ್ ಸೇರಿ ಆನ್ಲೈನ್ ಆ್ಯಪ್ಗಳ ಗಿಗ್ ಕಾರ್ಮಿಕರು ಮುಷ್ಕರ ನಡೆಸಿದ್ದರು. ಮುಷ್ಕರ ಅಷ್ಟೇನೂ ಪ್ರಭಾವ ಬೀರದಿದ್ದರು, ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿವೆ. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು.