ವಿಶ್ವಕಪ್ ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗಂಭೀರ್, ಮಾಧ್ಯಮಗಳು ಕೇವಲ ಸೂಪರ್‌ಸ್ಟಾರ್‌ಗಳನ್ನು ಸೃಷ್ಟಿಸಲು ಬಯಸುತ್ತವೆ. ಆದರೆ ಮುಖ್ಯ ತರಬೇತುದಾರನಾಗಿ ನನ್ನ ಕೆಲಸ ಸೂಪರ್ ತಂಡವನ್ನು ರಚಿಸುವುದು. ಡ್ರೆಸ್ಸಿಂಗ್ ರೂಮ್‌ನಲ್ಲಿರುವ 15 ಮಂದಿ ಆಟಗಾರರು ನನಗೆ ಸಮಾನ. ಅವರು ಎಷ್ಟು ರನ್ ಗಳಿಸಿದ್ದಾರೆ, ಎಷ್ಟು ಟಿಆರ್‌ಪಿ ತರುತ್ತಾರೆ ಅಥವಾ ಅವರ ಫಾಲೋಯರ್ಸ್ ಸಂಖ್ಯೆ ಎಷ್ಟು ಎಂಬುದು ನನಗೆ ಮುಖ್ಯವಲ್ಲ.