ಕೇಂದ್ರ ಸಚಿವ ಮಾಂಡವೀಯ ಕೇವಲ ಇದನ್ನು ಗೆಲುವಿನ ಕ್ಷಣದ ಶುಭಾಶಯವಾಗಿ ನೋಡಿಲ್ಲ, ಕಳೆದ ತಿಂಗಳು ಬಿಹಾರದ ಸಮಷ್ಟಿಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಲಾಟೀನು ಚಿಹ್ನೆ ಹೊಂದಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು, ಡಿಜಿಟಲ್ ಬೆಳಕು ಮತ್ತು ಸಂಪರ್ಕದಿಂದ ಬದಲಾಗಿರುವ ಈ ಕಾಲದಲ್ಲಿ ಬಿಹಾರಕ್ಕೆ ಲಾಟೀನುಗಳು ಅಗತ್ಯವಿಲ್ಲ ಎಂದಿದ್ದರು.