ಬಿಬಿಎಲ್ ಇತಿಹಾಸದಲ್ಲೇ ಮೊದಲು: ರಿಜ್ವಾನ್ ಆಟಕ್ಕೆ ಬೇಸತ್ತು ಪೆವಿಲಿಯನ್‌ಗೆ ಕರೆಸಿಕೊಂಡ ರೆನೆಗೇಡ್ಸ್ ನಾಯಕ | Mohammad Rizwan

ಮೊಹಮ್ಮದ್ ರಿಜ್ವಾನ್ ಅವರನ್ನು ನಿವೃತ್ತಿ ಹೊಂದಲು ಕೇಳಲಾಗುತ್ತಿದೆ
ಮೊಹಮ್ಮದ್ ರಿಜ್ವಾನ್ ಅವರನ್ನು ನಿವೃತ್ತಿ ಹೊಂದಲು ಕೇಳಲಾಗುತ್ತಿದೆ
Published on
ಸಿಡ್ನಿ: ಕ್ರಿಕೆಟ್ ಜಗತ್ತಿನಲ್ಲಿ ಆಘಾತಕಾರಿ ಘಟನೆ ನೆಡೆದಿದ್ದು, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದ ವೇಳೆ, ಸಿಡ್ನಿ ಥಂಡರ್ ವಿರುದ್ಧ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪಾಕಿಸ್ತಾನಿ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್(Mohammad Rizwan)​ರ ನಿಧಾನಗತಿಯ ಬ್ಯಾಟಿಂಗ್​ನಿಂದ ಬೆಸತ್ತ ರೆನೆಗೇಡ್ಸ್ ಆಡಳಿತ ಮಂಡಳಿಯು ದಿಢೀರ್​ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯಿಸಿರುವ ಘಟನೆ ನೆಡೆದಿದೆ.
ಈ ಘಟನೆಯು ಮೊದಲ ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ ಸಂಭವಿಸಿದೆ. ತಮ್ಮ ಬ್ಯಾಟಿಂಗ್​ ಉದ್ದಕ್ಕೂ ರನ್​ಗಳಿಸಲು ಹೆಣಗಾಡುತ್ತಿದ್ದ ರಿಜ್ವಾನ್ 23 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಕೊನೆಯ ಓವರ್​ಗಳಲ್ಲಿ ಸ್ಪೋಟಕ ಹೊಡೆತಗಳು ಆಗತ್ಯವಿದ್ದಾಗ ರೆನೆಗೇಡ್ಸ್ ನಾಯಕ ವಿಲ್ ಸದರ್ಲ್ಯಾಂಡ್ ಡಗೌಟ್‌ನಿಂದ ಉದ್ರಿಕ್ತವಾಗಿ ಕೈ ಬೀಸುತ್ತಾ, ರಿಜ್ವಾನ್‌ಗೆ ಪೆವಿಲಿಯನ್‌ಗೆ ಮರಳುವಂತೆ ಸೂಚಿಸಿದರು.
ಈ ನಿರ್ಗಮನದಿಂದ ರಿಜ್ವಾನ್ ಬಿಬಿಎಲ್ ಇತಿಹಾಸದಲ್ಲಿ ಪಂದ್ಯದ ವೇಳೆ ನಿವೃತ್ತಿ ಪಡೆದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಬದಲಿಗೆ ಸದರ್ಲ್ಯಾಂಡ್ ಅವರನ್ನು ಆಯ್ಕೆ ಮಾಡಲಾಯಿತು. ಆದರೂ ರೆನೆಗೇಡ್ಸ್ ಅಂತಿಮವಾಗಿ 170/8 ಕ್ಕೆ ಮುಗಿಸಿ ಡಿಎಲ್ಎಸ್ ವಿಧಾನದ ಮೂಲಕ ಪಂದ್ಯವನ್ನು ಸೋತಿತ್ತು.

ಇದು ಅಂತಾರಾಷ್ಟ್ರೀಯ ಅವಮಾನ 

ಈ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕೆಲವು ವಿಶ್ಲೇಷಕರು ರೆನೆಗೇಡ್ಸ್ ತಂಡದ ಕ್ಲಿನಿಕಲ್, ಮನಿಬಾಲ್ ವಿಧಾನವನ್ನು ಶ್ಲಾಘಿಸಿದರೆ, ಪಾಕಿಸ್ತಾನದ ಅನುಭವಿ ಆಟಗಾರನ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಎಕ್ಸ್​ನಲ್ಲಿ ವೈರಲ್ ಆದ ಒಂದು ಪೋಸ್ಟ್ ಈ ನಡೆಯನ್ನು ಅಂತಾರಾಷ್ಟ್ರೀಯ ಅವಮಾನ ಎಂದು ಕರೆದಿದೆ. ರಿಜ್ವಾನ್ ಅವರಂತಹ ಆಟಗಾರನನ್ನು ನಿಧಾನಗತಿಯ ಬ್ಯಾಟಿಂಗ್​ಗಾಗಿ ಸಾರ್ವಜನಿಕವಾಗಿ ಮೈದಾನದಿಂದ ಹೊರಹಾಕುವುದ ಅವಮಾನ ಎಂದು ಪಾಕ್​ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕ್ಷೀಣಿಸುತ್ತಿರುವ ಟಿ20 ಫಾರ್ಮ್

ಈ ಔಟಾಗುವಿಕೆಯಿಂದ ರಿಜ್ವಾನ್ ಬಿಬಿಎಲ್‌ನ ಕಳಪೆ ಋತುವಿಗೆ ಅಂತ್ಯ ಹಾಡಿದ್ದಾರೆ. ಎಂಟು ಪಂದ್ಯಗಳಲ್ಲಿ ಕೇವಲ 100 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 167 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net