ಮತ್ತೊಂದೆಡೆ, ಇರಾನ್ ತನ್ನ ಉಗ್ರ ಸ್ವರೂಪವನ್ನು ಪ್ರದರ್ಶಿಸಿದೆ. ಇಸ್ರೇಲ್ ಅಥವಾ ಅಮೆರಿಕವು ಇಸ್ಲಾಮಿಕ್ ಗಣರಾಜ್ಯದ ಆಡಳಿತವನ್ನು ಉರುಳಿಸಲು ಪ್ರಯತ್ನಿಸಿದರೆ, ಇಸ್ರೇಲ್ನ ಅತ್ಯಂತ ರಹಸ್ಯ ಮತ್ತು ಪ್ರಮುಖ 'ದಿಮೋನಾ' (Dimona) ಪರಮಾಣು ಕೇಂದ್ರವನ್ನು ಗುರಿಪಡಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸಚಿವ ಕಾಟ್ಜ್, ಇರಾನ್ನ ಯಾವುದೇ ಹೊಸ ನಾಯಕ ಕೂಡ ನಮ್ಮ ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.