ಒಕ್ಕಲಿಗ ಸಮಾಜಕ್ಕೆ ತೊಂದರೆಯಾದರೆ ಹೋರಾಟ-okkaliga community

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
Published on
ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ತೊಂದರೆಯಾಗುವ ಸಂದರ್ಭ ಎದುರಾದರೆ 1993ರ ಇತಿಹಾಸ ಮತ್ತೆ ಮರುಕಳಿಸಲಿದೆ. ಇದು ದೊಡ್ಡ ಹೋರಾಟಕ್ಕೆ ನಾಂದಿಯಾಗಲಿದೆ. ಹಾಗಾಗಿ, ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ಸಮಕಾಲೀನ ವ್ಯವಸ್ಥೆಯ ಜವಾಬ್ದಾರಿಯಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಫಸ್ಟ್ ಸರ್ಕಲ್ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ-2026’ ಕಾರ್ಯಕ್ರಮದಲ್ಲಿ ಮಾತನಾಡಿದರು.
1993ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆದಿತ್ತು. ಈಗಲೂ ಅಂತಹ ಸಂದರ್ಭ ಮರುಕಳಿಸಬಹುದು. ಆದರೆ, ಯಾಕೆ? ಏನು? ಎಂಬುದನ್ನು ಹೇಳಲು ಹೋಗುವುದಿಲ್ಲ. ಆಗಿನ ಸಂದರ್ಭಕ್ಕಿಂತ ಈಗ ಎಲ್ಲರೂ ಪ್ರಜ್ಞಾವಂತರಾಗಿದ್ದಾರೆ. ಹಾಗಾಗಿ, ಅಂತಹ ಸಂದರ್ಭ ಬಾರದಂತೆ ನೋಡಿಕೊಳ್ಳಬೇಕು. ಎಲ್ಲ ವಲಯಗಳಲ್ಲಿ ಒಕ್ಕಲಿಗ ಸಮುದಾಯ ಒಗ್ಗೂಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಒಕ್ಕಲಿಗ ಸಮಾಜ ಶಕ್ತಿಯುತ ಸಮಾಜವಾಗಿದೆ. ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಅತಿಹೆಚ್ಚು ನಮ್ಮ ಸಮಾಜದ ಜಮೀನು ಹೊಂದಿದ್ದರು. ಆದರೆ, ಇದೀಗ ಕೋಟ್ಯಂತರ ರೂ. ಮೌಲ್ಯದ ಜಮೀನು ಮಾರಿಕೊಂಡು ಬೀದಿಗೆ ಬಂದಿದ್ದಾರೆ. ಸಮಾಜದ ಬಂಧುಗಳು ತಮ್ಮ ಜಮೀನು ಉಳಿಸಿಕೊಳ್ಳುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಪೋರ್ಟಲ್‌ನಲ್ಲಿ ನೋಂದಾಯಿಸಿ
ಕೋವಿಡ್ ಸಂದರ್ಭದಲ್ಲಿ ಆಹಾರ ಮೌಲ್ಯವರ್ಧನೆ ಉದ್ಯಮಕ್ಕೆ ಸಾಕಷ್ಟು ಬೇಡಿಕೆ ಇತ್ತು. ಯಾವ ದೇಶಗಳಿಗೆ ಯಾವ್ಯಾವ ಉತ್ಪನ್ನಗಳು ಬೇಕಿದೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಆ ದೇಶಗಳಿಗೆ ಉತ್ಪನ್ನವನ್ನು ರಫ್ತು ಮಾಡುತ್ತಿದ್ದೇವೆ. ಹಾಗಾಗಿ, ಯಾವ ಉದ್ಯಮಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದರ ಬಗ್ಗೆ ಫಸ್ಟ್ ಸರ್ಕಲ್, ಅಧ್ಯಯನ ನಡೆಸಬೇಕು. ಈ ಮೂಲಕ ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಇದೆ ಎಂಬುದರ ಆಧಾರದಲ್ಲಿ ಸಮುದಾಯದ ಯುವಕರು ಉದ್ದಿಮೆ ಸ್ಥಾಪಿಸಲು ಮುಂದಾಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು. ನಮ್ಮ ದೇಶದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ವೇಗವಾಗಿ ಬೆಳೆಯುತ್ತಿದೆ. ಈ ಕ್ಷೇತ್ರ 33 ಕೋಟಿ ಜನರಿಗೆ ಉದ್ಯೋಗ ನೀಡಿದೆ. ಉದ್ಯಮಿಗಳಿಗೆ ನೆರವಾಗಲು ನಮ್ಮ ಸರ್ಕಾರ ಹೊರತಂದಿರುವ ‘ಉದ್ಯಮ ಪೋರ್ಟಲ್’ನಲ್ಲಿ 7.40 ಕೋಟಿ ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಲಘು ಉದ್ಯಮಿಗಳು ಜಾಸ್ತಿ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇ ಬೆಳೆಸಲು ದೊಡ್ಡ ಆಲೋಚನೆ ಮಾಡಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಒತ್ತು ಕೊಡುತ್ತಿದ್ದಾರೆ ಎಂದರು.
ಸಬ್ಸಿಡಿ ಸದ್ಬಳಕೆ ಮಾಡಿಕೊಳ್ಳಿ
ಒಕ್ಕಲಿಗರ ಸಮುದಾಯಯದ ಯುವಕರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸಲು ಮುಂದಾಗಿರವ ಸ್ಟ್ ಸರ್ಕಲ್ ಕಾರ್ಯ ಶ್ಲಾಘನೀಯ. ಹಿಂದೆ ಈ ಸಮಾಜ ಸೀಮಿತ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿತ್ತು. ಇದೀಗ ಎಲ್ಲ ಕ್ಷೇತ್ರಗಳಲ್ಲೂ ಸಮಾಜ ಬೆಳೆಯುತ್ತಿದೆ. ನಮ್ಮ ಸಮಾಜದ ಶೇ.90 ಮಂದಿ ಕೃಷಿ ಕ್ಷೇತ್ರ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ 3 ಕೋಟಿ ರೂ.ವರೆಗೆ ಸಬ್ಸಿಡಿ ನೀಡುವ ಯೋಜನೆಗಳಿದ್ದು, ಯುವಕರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಉದ್ದಿಮೆ ಸ್ಥಾಪಿಸುವಂತಾಗಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸಲಹೆ ನೀಡಿದರು.
ಮೊದಲಿಗೆ ಒಕ್ಕಲಿಗ ಸಮಾಜವನ್ನು ಗುರುತಿಸಿದವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ. ಬಳಿಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ದೇಶಕ್ಕೆ ನಮ್ಮ ಸಮಾಜದ ಶಕ್ತಿಯ ಬಗ್ಗೆ ತೋರಿಸಿಕೊಟ್ಟರು. ನಮ್ಮ ರಾಜ್ಯದಲ್ಲಿ ಸ್ಥಳೀಯರ ಬದಲು ಬೇರೆ ರಾಜ್ಯದವರೇ ಹೆಚ್ಚು ಉದ್ಯಮಿಗಳಾಗುತ್ತಿದ್ದಾರೆ. ಹಿಂದೆಯೇ ಒಕ್ಕಲಿಗರು ಉದ್ಯಮಿಗಳಾಗಬೇಕಿತ್ತು.
ಜಿ.ಟಿ. ದೇವೇಗೌಡ, ಶಾಸಕ
ಜನನಾಯಗನ್'ಗೆ ರಾಜಕೀಯವೇ ಮುಳುವಾಯ್ತಾ? ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ರೀಫಂಡ್​ ಇದು!ಒಕ್ಕಲಿಗರಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಜಯರಾಮ್ ರಾಯಪುರ ಮುಂದಾಗಿದ್ದಾರೆ. ಅವರಲ್ಲಿ ದೊಡ್ಡ ಔದಾರ್ಯ ಗುಣ ಇದೆ. ನಮ್ಮ ಸಮಾಜದವರು ದೊಡ್ಡ ಹುದ್ದೆಗಳಿಗೆ ನೇಮಕವಾಗಬೇಕು. ಒಕ್ಕಲಿಗರು ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸುವಂತಾಗಬೇಕು. ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುವವರನ್ನು ನೆನಪಿಸಿಕೊಳ್ಳುವಂತಾಗಬೇಕು. ಯಾವುದೇ ಕಾರಣಕ್ಕೂ ಒಕ್ಕಲಿಗರು ಸಮಾಜದ ಬಂಧುಗಳು ಜಮೀನು ಮಾರುವುದಕ್ಕೆ ಹೋಗಬಾರದು.
ಗೋಪಾಲಯ್ಯ, ಶಾಸಕ
ಸಮುದಾಯದ ಜನರು ಸೂಕ್ಷ್ಮ, ಸಣ್ಣ, ಮಧ್ಯಮ ಉದ್ದಿಮೆಗಳನ್ನು ಸ್ಥಾಪಿಸುತ್ತಿದ್ದಾರೆ. ಒಕ್ಕಲಿಗರ ಉದ್ಯಮಿಗಳು ಪರಸ್ಪರ ಸಹಕಾರ ಪಡೆದು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಬೇಕು. ಈ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ಟ್ ಸರ್ಕಲ್ ಸ್ಥಾಪಿಸಲಾಯಿತು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಶಾಖೆ ತೆರೆಯಲು ಗುರಿ ಇದೆ. ಒಂದು ವರ್ಷದಿಂದ ಸಿದ್ಧಪಡಿಸಿರುವ ರೂಪುರೇಷಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಇನ್ನಷ್ಟು ಗಟ್ಟಿಯಾಗಿ ಸ್ಟ್ ಸರ್ಕಲ್ ಸಂಘಟಿಸಲು ಹಲವು ಕ್ರಮ ತೆಗೆದುಕೊಂಡಿದ್ದೇವೆ.
 ಜಯರಾಮ್ ರಾಯಪುರ, ಫಸ್ಟ್ ಸರ್ಕಲ್ ಸಂಸ್ಥಾಪಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net