ಈ ಕುರಿತು ಮಾಹಿತಿ ನೀಡಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಕ್ತಾರೆ ಟ್ರಿಸಿಯಾ ಮೆಕ್‌ಲಾಫ್ಲಿನ್, ಟ್ರಂಪ್ ಆಡಳಿತದ ವಲಸೆ ಶಿಸ್ತುಕ್ರಮದ ಭಾಗವಾಗಿ ಫೆಡರಲ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಕೈಯಲ್ಲಿ ಬಂದೂಕು ಹಿಡಿದ ವ್ಯಕ್ತಿಯೊಬ್ಬರು ಅವರನ್ನು ಸಮೀಪಿಸಿದ್ದಾರೆ. ಆಗ ಅಧಿಕಾರಿಗಳು ಅವರನ್ನು ನಿಶ್ಯಸ್ತ್ರಗೊಳಿಸಲು ಪ್ರಯತ್ನಿಸಿದ್ದು, ಸಂಘರ್ಷ ನಡೆದಿದೆ. ಈ ವೇಳೆ ರಕ್ಷಣಾತ್ಮಕವಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.