ಇಸ್ರೇಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭದ್ರತಾ ಅಪಾಯಗಳು ಮತ್ತು ಅನಿಶ್ಚಿತತೆಯ ನಡುವೆ ತನ್ನ ಸಿಬ್ಬಂದಿಗಳ ಸುರಕ್ಷತೆಯನ್ನು ಪುನರ್ವಿಮರ್ಶಿಸಿದ ವಾಷಿಂಗ್ಟನ್, ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಫೆ.27ರಂದು ಅಧಿಕೃತವಾಗಿ ಹೊರಡಿಸಲಾದ ಈ ಆದೇಶವು, "ಮಿಷನ್ ಇಸ್ರೇಲ್" ಅಡಿಯಲ್ಲಿ ಕಾರ್ಯನಿರ್ವಹಿಸುವ ತುರ್ತು ಅವಶ್ಯಕತೆಯಿಲ್ಲದ ಸರ್ಕಾರಿ ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರಿಗೆ ಅನ್ವಯಿಸುತ್ತದೆ.