ಇನ್ನೊಂದೆಡೆ, ಪ್ರಶ್ನೆಪತ್ರಿಕೆ ಸೋರಿಕೆ ಸಾಲು ಸಾಲು ಪ್ರಕರಣಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಮತ್ತು ಸಿಜೆಪಿ ಪ್ರತಿಭಟನಾಕಾರರು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಸಚಿವರ ರಾಜೀನಾಮೆಯನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸಲು ಪೂರ್ವಾಪೇಕ್ಷಿತ ಷರತ್ತನ್ನಾಗಿ ವಿಪಕ್ಷಗಳು ಮುನ್ನೆಲೆಗೆ ತಂದಿವೆ. ಸರ್ಕಾರವು ಸಂಸತ್ತಿನಲ್ಲಿ ಈ ವಿಷಯದ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದೆಯಾದರೂ, ವಿಪಕ್ಷಗಳು ಇಂತಹ ಷರತ್ತುಗಳನ್ನು ವಿಧಿಸುವ ಮೂಲಕ ಚರ್ಚೆಯನ್ನು ಬಾಕಿ ಉಳಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದೆ, (ಏಜೆನ್ಸೀಸ್).