ಸಾಲ ನೀಡಿದವನೊಬ್ಬ ಸಂತ್ರಸ್ತ ಕುಡೆ ಅವರ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿದ್ದಾನೆಂದು ವರದಿಯಾಗಿದೆ. ಕುಡೆ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕೋಲ್ಕತ್ತಾಗೆ ಕರೆದೊಯ್ದರು, ಬಳಿಕ ಕಾಂಬೋಡಿಯಾದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಮತ್ತು ಅವನು ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಿ, ಅದಕ್ಕೆ ಪ್ರತಿಯಾಗಿ 8 ಲಕ್ಷ ರೂ ಪಡೆದುಕೊಂಡನು. ರೈತ ಕುಡೆ 2021 ರ ಏಪ್ರಿಲ್‌ನಲ್ಲಿ ಸಾಲ ಪಡೆದಿದ್ದ ಎಂದು ಚಂದ್ರಾಪುರ ಪೊಲೀಸ್ ವರಿಷ್ಠಾಧಿಕಾರಿ ಸುದರ್ಶನ್ ಮುಮಕ್ಕ ಮಾಹಿತಿ ನೀಡಿದ್ದು, ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸಲಾಯಿತು ಮತ್ತು ಮೂರು ವರ್ಷಗಳ ಕಾಲ ನಿರಂತರವಾಗಿ ಕಂತುಗಳನ್ನು ಮರುಪಾವತಿಸಿದರೂ,ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಲು ಒತ್ತಾಯಿಸಲಾಯಿತು. ಇದೇ ವಿಷಯವಾಗಿ ಸದ್ಯ ಸಾಲದಾತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದರು.