ತುಳು ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ: ಬನ ಚಿತ್ರದ ಪ್ರಮುಖ ಪಾತ್ರದಲ್ಲಿ ನಟನೆ | Jayaprakash Shetty

ಬನ ಚಿತ್ರದ ಪೋಸ್ಟರ್
ಬನ ಚಿತ್ರದ ಪೋಸ್ಟರ್
Published on
ಬೆಂಗಳೂರು: ಖ್ಯಾತ ನಿರೂಪಕ ಮತ್ತು ಪತ್ರಕರ್ತ ಜಯಪ್ರಕಾಶ್ ಶೆಟ್ಟಿ(Jayaprakash Shetty) ಸುದ್ದಿ ನಿರೂಪಣೆ ಬಿಟ್ಟು ತುಳು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ತುಳು ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಧರ್ಮ ದೈವ ಹಾಗೂ ಧರ್ಮ ಚಾವಡಿ ಚಿತ್ರದ ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ ಅವರ ಬಹುನಿರೀಕ್ಷಿತ ‘ಬನ’ ಸಿನಿಮಾದಲ್ಲಿ ಜಯಪ್ರಕಾಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
ಈಗಾಗಲೇ ಬನ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ  ಅಪಾರ  ಜನಪ್ರಿಯತೆಗಳಿಸಿರುವ ಜಯಪ್ರಕಾಶ್  ಶೆಟ್ಟಿ ಅವರಿಗೆ ಈ ವರ್ಷ big boss ಟೀಮ್​ನಿಂದಲೂ ಆಹ್ವಾನ ಬಂದಿತ್ತು. ಆದರೆ ಅದಕ್ಕೆ ಹೋಗಲು ನಿರಾಕರಿಸಿದೆ ಎಂದು ಸ್ವತಃ ಜಯಪ್ರಕಾಶ್ ಶಟ್ಟಿಯವರೇ ತಮ್ಮ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ತಿಳಿಸಿದ್ದರು.
ಬನ ಸಿನೆಮಾದ  ಹಲವು ಸನ್ನಿವೇಶಗಳ ಶೂಟಿಂಗ್ ಮಂಗಳೂರು ಮತ್ತು ಪುತ್ತೂರು ಮುಂತಾದ ಕಡೆ ನಡೆದಿದೆ. ಜಯಪ್ರಕಾಶ್  ಶೆಟ್ಟಿ ಸುಮಾರು 6 ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನಾಗ ದೇವರ ವಾಸ ಸ್ಥಳವಾದ  ನಾಗಬನ ಈ ಸಿನೆಮಾದ ಮೂಲ ಕಥಾವಸ್ತು ಎನ್ನಲಾಗಿದೆ. ಶೀಘ್ರದಲ್ಲೇ ಸಿನಿಮಾ ತಂಡ ಚಿತ್ರದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಲಿದೆ.
ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿಯವರು ಆರಂಭದಿಂದ ಈಟಿವಿ ಕನ್ನಡ, ಏಷ್ಯಾನೇಟ್ ಸುವರ್ಣ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದು, ತಮ್ಮ ಸಾಮಾಜಿಕ ಕಳಕಳಿಯ ‘ಬಿಗ್ ಬಿ’ ಕಾರ್ಯಕ್ರಮದಿಂದ ಅವರು ಖ್ಯಾತರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net